ಸಲೂನ್ ಶಾಪ್ ನಲ್ಲೇ ಸಹಾಯಕಿ ಮೇಲೆ ಅತ್ಯಾಚಾರ

ಬೆಂಗಳೂರು: ಸಲೂನ್ ಶಾಪ್ ನಲ್ಲಿ ಸಹಾಯಕ ವ್ಯವಸ್ಥಾಪಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದ್ದು, ಜಯನಗರ ಠಾಣೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜಯನಗರ ನಾಲ್ಕನೇ ಹಂತದ ನಿವಾಸಿ ರವೀಂದ್ರ ಶೆಟ್ಟಿ ಬಂಧಿತ ಆರೋಪಿ. 21 ವರ್ಷದ ಸಂತ್ರಸ್ತೆ ಜಯನಗರ ನಾಲ್ಕನೇ ಹಂತ ಆರನೇ ಮುಖ್ಯರಸ್ತೆಯಲ್ಲಿರುವ ಸಲೂನ್ ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿದ್ದಾರೆ.  ಸಲೂನ್ ಮಾಲಕೀಯ ಭಾವ ರವೀಂದ್ರ ಶೆಟ್ಟಿ ಸಲೂನ್ ಗೆ ಬಂದು ಉಚಿತವಾಗಿ ಸೇವೆ ಪಡೆದುಕೊಂಡಿದ್ದಾನೆ.

ಫೆಬ್ರವರಿ 14ರಂದು ಮಧ್ಯಾಹ್ನ 2:30ರ ಸಮಯದಲ್ಲಿ ಸಲೂನ್ ಗೆ ಬಂದಿದ್ದ ರವೀಂದ್ರ ಶೆಟ್ಟಿ ಮಾತನಾಡಿಸುವ ನೆಪದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬಲವಂತವಾಗಿ ವಿಶ್ರಾಂತಿ ಕೊಠಡಿಗೆ ಕರೆದೊಯ್ದು ಆನೈಸರ್ಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಸಲೂನ್ ಮಾಲಕಿ ಮತ್ತು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read