ನವದೆಹಲಿ : ದಕ್ಷಿಣ ದೆಹಲಿಯ ಸೌತ್ ಏಷ್ಯನ್ ವಿವಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. 18 ವರ್ಷದ ವಿದ್ಯಾರ್ಥಿನಿಯೋರ್ವಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆ ಎಂದು ಸಹಾಯ ಕೋರಿದ್ದು, ಆದರೆ ಹಾಸ್ಟೆಲ್ ಸಿಬ್ಬಂದಿ ಅತ್ಯಾಚಾರ ಆಗಿದ್ರೆ ಸ್ನಾನ ಮಾಡು ಬಟ್ಟೆ ಬದಲಾಯಿಸು ಎಂದು ಅಸಡ್ಡೆಯಾಗಿ ಮಾತನಾಡಿದ್ದಾರೆ. ದಕ್ಷಿಣ ದೆಹಲಿಯ ಸೌತ್ ಏಷ್ಯನ್ ವಿವಿಯಲ್ಲಿ ಈ ಘಟನೆ ನಡೆದಿದೆ.
ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದರು. ಈ ವಿಚಾರವನ್ನ ಹಾಸ್ಟೆಲ್ ಸಿಬ್ಬಂದಿಗೆ ಹೇಳಿ ಸಹಾಯಕ್ಕೆ ಅಂಗಲಾಚಿದಾಗ ಹಾಸ್ಟೆಲ್ ಸಿಬ್ಬಂದಿ ಅವಳ ಮಾತನ್ನು ನಿರ್ಲಕ್ಷಿಸಿ ಹೋಗಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿಕೊಂಡು ಬಾ ಎಂದಿದ್ದಾರೆ.
ಅಲ್ಲದೇ ಹೆಣ್ಣು ಮಕ್ಕಳಿಗೆ ತುಂಬಾ ಜನ ಬಾಯ್ ಫ್ರೆಂಡ್ಸ್ ಇರುತ್ತಾರೆ. ಬಿಗಿ ಭದ್ರತೆ ಇಲ್ಲದೇ ಇರುವುದರಿಂದ ಅವರನ್ನ ಕೋಣೆಗೆ ಕರೆ ತರುತ್ತಾರೆ ಎಂದು ಹೇಳಿ ವಿದ್ಯಾರ್ಥಿಗೆ ಅವಮಾನಿಸಿ ಅವಮಾನೀಯವಾಗಿ ನಡೆದುಕೊಂಡಿರುವ ಆರೋಪ ಕೇಳಿಬಂದಿದೆ .ಅತ್ಯಾಚಾರ ಆರೋಪಿಗಳು ಹಾಗೂ ಅಸಡ್ಡೆ ತೋರಿದ ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.