ನವದೆಹಲಿ: ಅತ್ಯಾಚಾರಿ, ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಪರೋಲ್ ಮೇಲೆ ಹೊರಗಡೆ ಬಂದು ಖಡ್ಗದಿಂದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾನೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 20 ವರ್ಷ ಈತನಿಗೆ ಜೈಲು ಶಿಕ್ಷೆಯಾಗಿದೆ. ಸದ್ಯ ಈತ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿದ್ದಾನೆ. ಈ ಮೊದಲೂ ಪರೋಲ್ ಮೇಲೆ ಹೊರ ಬಂದಿದ್ದ ಈತ, ಈಗ 40 ದಿನಗಳ ಪರೋಲ್ ಮೇಲೆ ಹೊರ ಬಂದಿದ್ದು, ಉತ್ತರ ಪ್ರದೇಶದ ಬಾಘ್ಪೇಟ್‌ದಲ್ಲಿರುವ ತನ್ನ ಬರ್ನವಾ ಆಶ್ರಮಕ್ಕೆ ತೆರಳಿದ್ದಾನೆ. ಅಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.
ಹುಟ್ಟುಹಬ್ಬ ಆಚರಿಸಿಕೊಳ್ಳಲು ಈತ ಪರೋಲ್ ಕೇಳಿದ್ದ. “ಐದು ವರ್ಷಗಳಲ್ಲಿ ಈ ರೀತಿ ಸಂಭ್ರಮಾಚರಿಸಲು ಇದೇ ಮೊದಲ ಬಾರಿಗೆ ನನಗೆ ಅವಕಾಶ ಸಿಕ್ಕಿದೆ. ಹೀಗಾಗಿ ನಾನು ಕನಿಷ್ಠ ಐದು ಕೇಕ್‌ಗಳನ್ನು ಕತ್ತರಿಸಬೇಕು. ಇದು ಮೊದಲ ಕೇಕ್” ಎಂದು ಡೇರಾ ಮುಖ್ಯಸ್ಥ ಹೇಳುವುದು ವಿಡಿಯೋದಲ್ಲಿ ಕಾಣಿಸಿದೆ. ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಶಸ್ತ್ರಾಸ್ತ್ರ ಕಾಯ್ದೆ ಅಡಿ ನಿಷೇಧಿತವಾಗಿದೆ. ಹೀಗಾಗಿ ರಾಮ್ ರಹೀಂ ನಡೆ ಚರ್ಚೆಗೆ ಗ್ರಾಸವಾಗಿದೆ.
https://twitter.com/Salaria_Shikha1/status/1617510789094723587?ref_src=twsrc%5Etfw%7Ctwcamp%5Etweetembed%7Ctwterm%5E1617510789094723587%7Ctwgr%5E5fad31336f5c4e9e02a23f394c2970fcceda528a%7Ctwcon%5Es1_&ref_url=https%3A%2F%2Fwww.india.com%2Fnews%2Findia%2Frape-convict-dera-chief-ram-rahim-cuts-cake-with-sword-video-goes-viral-5866773%2F