ಬೆಂಗಳೂರು: ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆಟೋ ಚಾಲಕನ್ನು ಬಂಧಿಸಿರುವ ಗಹ್ಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ತೋಟದಗುಡ್ಡಹಳ್ಳಿಯಲ್ಲಿ ನಡೆದಿದೆ.
26 ವರ್ಷದ ದೀಪು ಬಂಧಿತ ಆರೋಪಿ. ಆರೋಪಿ ದೀಪು ಬಾಲಕಿ ಮನೆಯ ಪಕ್ಕದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ರಾತ್ರಿ ಆಟೋ ಬಾಡಿಗೆ ಹೋಗುತ್ತಿದ್ದ. ಪಕ್ಕದ ಮನೆಯಲ್ಲಿಯೇ ಇದ್ದುದರಿಂದ ಸಹಜವಾಗಿ ಪರಿಚಯವಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ದೀಪು ಬಾಲಕಿಯನ್ನು ಪುಸಲಾಯಿಸಿ ಮಾತನಾಡಬೇಕು ಎಂದು ಮನೆಗೆ ಕರೆದಿದ್ದಾನೆ. ಬಳಿಕ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಅಲ್ಲದೇ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಬಳಿಕ ಮತ್ತೆ ಮೂರು ನಾಲ್ಕು ಬಾರಿ ಬಾಲಕಿಗೆ ಬೆದರಿಸಿ ಮನೆಗೆ ಕರೆದು ಅತ್ಯಾಚಾರವೆಸಗಿದ್ದಾಅನೆ. ಬಾಲಕಿ ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದಾಗ ಬಾಲಕಿ ಗರ್ಭಿಣಿ ಎಂಬುದು ಗೊತ್ತಾಗಿದೆ. ಪಕ್ಕದ ಮನೆಯ ಆಟೋ ಚಾಲಕನೇ ಕೃತ್ಯವೆಸಗಿದ್ದಾಗಿ ಬಾಲಕಿ ಬಾಯ್ಬಿಟ್ಟಿದ್ದಾಳೆ. ಸಂತ್ರಸ್ತ ಬಾಲಕಿ ತಾಯಿ ದೂರಿನ ಹಿನ್ನೆಲೆಯಲ್ಲಿ ಆರೋಪಿ ದೀಪುನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.