ಅತ್ಯಾಚಾರ, ಗರ್ಭಪಾತ, ಖಾಸಗಿ ವಿಡಿಯೋ… ನಟ ಮಡೆನೂರು ಮನು ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿ ನೀಡಿದ ಸಂತ್ರಸ್ತ ನಟಿ  

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೇನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ಹಾಸನ ಜಿಲ್ಲೆ ಮಡೆನೂರಿನಲ್ಲಿ ಮನು ಬಂಧಿಸಿ ಕರೆತಂದಿದ್ದಾರೆ.

ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಕಿರುತೆರೆ ನಟಿ ಮತ್ತಷ್ಟು ಗಂಭೀರವಾದ ಆರೋಪ ಮಾಡಿದ್ದಾರೆ. ಮನು ವಶೀಕರಣ ಮಾಡುತ್ತಿದ್ದ, ಬೂದಿ ಎರಚುತಿದ್ದ ಎಂದು ಹೇಳಿದ್ದಾರೆ.

ಮಡೆನೂರು ಮನು ವಶೀಕರಣ ಮಾಡುತ್ತಿದ್ದ. ಬೂದಿ ಎರಚುತಿದ್ದ. ಮನು ಎರಡು ಬಾರಿ ನನಗೆ ಗರ್ಭಪಾತ ಮಾಡಿಸಿದ್ದಾನೆ. ನನ್ನ ಹೆಂಡತಿ ನನಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಹೇಳುತ್ತಿದ್ದ. ಸರಿ ಮಾಡಿಕೊಳ್ಳುವುದಾಗಿ ಕಷ್ಟಪಡುತ್ತಿದ್ದೇನೆ ಎಂದು ಹೇಳುತ್ತಿದ್ದ. ನಮ್ಮ ತಂದೆ, ಅಜ್ಜನಿಗೆ ಇಬ್ಬರು ಪತ್ನಿಯರಿದ್ದರು. ನನಗೂ ನೀನು ಪತ್ನಿಯಾಗಿದ್ದೀಯಾ. ಎರಡು ವರ್ಷದ ನಂತರ ಎಲ್ಲರಿಗೂ ಹೇಳುತ್ತೇನೆ ಎಂದಿದ್ದ. ದುಡ್ಡಿಗೋಸ್ಕರ ಆರೋಪ ಮಾಡಿದ್ದಾಳೆ ಎಂದು ಮನು ಹೇಳುತ್ತಿದ್ದಾನೆ. ನಾನೇ ಅವನಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ. ನಾನ್ಯಾಕೆ ದುಡ್ಡಿಗೆ ಡಿಮ್ಯಾಂಡ್ ಮಾಡಲಿ. ಮನುಗೆ ಜಿಮ್ ಹೋಗಲು ಸಹ ನಾನೇ ದುಡ್ಡು ಕೊಟ್ಟಿದ್ದೇನೆ. ಮುಂದಿನ ಸಿನಿಮಾ ತಮನ್ನಾ ಜೊತೆಗೆ ಎಂದು ಮನು ಹೇಳಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.

ನೀನು ದಪ್ಪ ಇದಿಯಾ ಎಂದು ಮಡೆನೂರು ಮನು ನನಗೆ ಹೀಯಾಳಿಸುತ್ತಿದ್ದ. ಲೇಡಿ ಡಾನ್ ಹೀರೊ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಡ್ರಿಂಕ್ಸ್ ತಂದು ನನಗೂ ಕುಡಿಸಿ ಖಾಸಗಿ ವಿಡಿಯೋ ಮಾಡ್ಕೊಂಡಿದ್ದಾನೆ. ನನಗೆ ಹುಷಾರಿಲ್ಲ ಅಂತ ಗೊತ್ತಿದ್ದರೂ ಸಹ ನನ್ನ ಯೋಗ ಕ್ಷೇಮ ವಿಚಾರಿಸಲಿಲ್ಲ. ನನ್ನ ಮೇಲೆ ಅತ್ಯಾಚಾರ ಎಸಗಿ ತಾಳಿ ಕಟ್ಟಿದರೆ ಅದಕ್ಕೆ ಏನು ಬೆಲೆ ಇದೆ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರಿಗೆ ದೂರು ನೀಡುತ್ತೇನೆ ಎಂದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಶನಿವಾರ ಬಂದು ನನ್ನ ಮೇಲೆ ಮತ್ತೆ ಅತ್ಯಾಚಾರ ಎಸಗಿ ಹೋಗಿದ್ದಾನೆ. ನನ್ನ ಪತ್ನಿಗೆ ವಿಚ್ಛೇದನ ನೀಡಿ, ನಿನ್ನನ್ನು ಮದುವೆ ಆಗುತ್ತೇನೆ ಅಂತ ಹೇಳಿದ್ದ. ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read