ಡಾಕ್ಟರ್ ನಿಂದಲೇ ನರ್ಸ್ ಗೆ ಮೋಸ; ಗರ್ಭಿಣಿಯಾಗುತ್ತಿದ್ದಂತೆ ನಾನವನಲ್ಲ ಎಂದ ವೈದ್ಯ; ಯುವತಿ ಮೇಲೆಯೆ ಹನಿಟ್ರ್ಯಾಪ್ ಕೇಸ್ ದಾಖಲಿಸಿದ್ದ ಭೂಪ

ಹಾವೇರಿ: ಪ್ರತಿಷ್ಠಿತ ಆಸ್ಪತ್ರೆಯ ವೈದ್ಯನೇ ನರ್ಸ್ ಜೊತೆ ಪ್ರೀತಿ-ಪ್ರೇಮದ ಹೆಸರಲ್ಲಿ ಮೋಸ ಮಾಡಿ, ಬಳಿಕ ಆಕೆ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸಿಕ್ಕಿ ಬಿದ್ದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

ರಾಣೆಬೆನ್ನೂರಿನ ಪ್ರತಿಷ್ಠಿತ ಹಿತ್ತಲಮನಿ ದಂತ ಆಸ್ಪತ್ರೆಯ ವೈದ್ಯನಾಗಿದ್ದ ಡಾ.ವಿಜಯ್ ಕುಮಾರ್, ಅದೇ ಆಸ್ಪತ್ರೆಯ ನರ್ಸ್ ರೇಖಾಳನ್ನು ಪ್ರೀತಿಸಿದ್ದ. ಇಬ್ಬರ ನಡುವಿನ ಪ್ರೀತಿ ಪ್ರೇಮಾಂಕುರದವರೆಗೂ ತೀರುಗಿದೆ. ಇದೇ ರೀತಿ ನರ್ಸ್ ರೇಖಾಳನ್ನು ಮೂರು ಬಾರಿ ಗರ್ಭಿಣಿಯನ್ನಾಗಿ ಮಾಡಿದ್ದಾನೆ ವೈದ್ಯಮಹಾಶಯ.

ರೇಖಾ ಮದುವೆ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ ವೈದ್ಯ ನಿರಾಕರಿಸುತ್ತಿದ್ದ. ವೈದ್ಯನ ವರ್ತನೆಗೆ ಬೇಸತ್ತ ನರ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ವೇಳೆ ತನ್ನ ಮತ್ತೊಂದು ವರಸೆ ಶುರು ಮಾಡಿದ್ದ ವೈದ್ಯ, ಪೊಲೀಸರಿಗೂ ಹಣ ನೀಡಿವುದಾಗಿ ಹೇಳಿ ಆಕೆ ತನ್ನಿಂದ ದೂರಾಗುವಂತೆ ಮನವಿ ಮಾಡಿದ್ದ. ಲಕ್ಷಾಂತರ ರೂಪಾಯಿ ಹಣ ನೀಡಲು ಮುಂದಾಗಿ ಅಲ್ಪಸ್ವಲ್ಪ ಹಣ ಕೊಟ್ಟು ನರ್ಸ್ ರೇಖಾಳ ಮೊಬೈಲ್ ನಲ್ಲಿದ್ದ ಎಲ್ಲಾ ದಾಖಲೆಗಳನ್ನು ಡಿಲಿಟ್ ಮಾಡಿಸಿ ಬಳಿಕ ಆಕೆಯ ವಿರುದ್ಧವೇ ಹನಿಟ್ರ್ಯಾಕ್ ಕೇಸ್ ಕೂಡ ದಾಖಲಿಸಿದ್ದಂತೆ.

ಇದ್ಯಾವುದಕ್ಕೂ ಹೆದರದ ನರ್ಸ್ ರೇಖಾ, ಎಲ್ಲಾ ವೈದ್ಯಕೀಯ ಪರೀಕ್ಷೆಗೂ ಸಿದ್ಧ ಎಂದು ಮಾಧ್ಯಮಗಳ ಮುಂದೆ ಬಂದು ವೈದ್ಯನಿಂದ ತನಗಾದ ಅನ್ಯಾಯ ಹಾಗೂ ಪೊಲೀಸ್ ಠಾಣೆಯಲ್ಲಿಯೂ ನ್ಯಾಯ ಸಿಗದ ಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವೇಳೆ ಎಚ್ಚೆತ್ತ ಪೊಲೀಸರು ಆರೋಪಿ ವೈದ್ಯ ವಿಜಯ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read