ಬಾಲಿವುಡ್ ನಟ ರಣಬೀರ್ ಕಪೂರ್ ರಿಂದ ‘ಆದಿಪುರುಷ್’ ಚಿತ್ರದ 10,000 ಟಿಕೆಟ್ ಬುಕಿಂಗ್

ಬಾಲಿವುಡ್ ನಟ ರಣಬೀರ್ ಕಪೂರ್ ‘ಆದಿಪುರುಷ್’ ಚಿತ್ರದ 10,000 ಟಿಕೆಟ್‌ ಗಳನ್ನು ಕಾಯ್ದಿರಿಸಲಿದ್ದಾರೆ. ಬಾಲಿವುಡ್ ಸ್ಟಾರ್ ನಿರ್ದೇಶಕ ಓಂ ರಾವುತ್ ಅವರ ಬಹುನಿರೀಕ್ಷಿತ ಚಲನಚಿತ್ರ ‘ಆದಿಪುರುಷ್’ ಚಿತ್ರವನ್ನು ಹಿಂದುಳಿದ ಮಕ್ಕಳಿಗಾಗಿ ತೋರಿಸಲು ಟಿಕೆಟ್‌ ಕಾಯ್ದಿರಿಸಲಿದ್ದಾರೆ.

‘ಆದಿಪುರುಷ್’ನಲ್ಲಿ ಶ್ರೇಷ್ಠ ಪೌರಾಣಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ. ಚಿತ್ರದಲ್ಲಿ ನಟ ಪ್ರಭಾಸ್ ಭಗವಾನ್ ರಾಮನಾಗಿ, ಸೈಫ್ ಅಲಿ ಖಾನ್ ‘ಲಂಕೇಶ್’ ಮತ್ತು ಕೃತಿ ಸನೋನ್ ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಆದಿಪುರುಷ್’ ಜೂನ್ 16, 2023 ರಂದು ಥಿಯೇಟರ್‌ ಗಳಿಗೆ ಬರಲಿದೆ. ಪ್ಯಾನ್-ಇಂಡಿಯಾ ರಿಲೀಸ್ ಆಗಿರುವ ಕಾರಣ ಈ ಸಿನಿಮಾವನ್ನು ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಚಿತ್ರೀಕರಿಸಲಾಗಿದೆ. ಇಂಡಸ್ಟ್ರಿಯಲ್ಲಿ ಇದುವರೆಗೆ ತಯಾರಾದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ‘ಆದಿಪುರುಷ್’ ಕೂಡ ಒಂದಾಗಲಿದೆ.

ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳಿಗೆ ಪ್ರಭಾಸ್ ‘ಆದಿಪುರುಷ್’ ಚಿತ್ರದ 10,000 ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮುಂದಾಗಿದ್ದಾರೆ. ಅವರು ರೆಬೆಲ್ ಸ್ಟಾರ್ ಪ್ರಭಾಸ್ ಅವರ ಮಹಾಕಾವ್ಯ ಪೌರಾಣಿಕ ಚಿತ್ರ ‘ಆದಿಪುರುಷ್’ನ 10,000 ಟಿಕೆಟ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ತೆಲಂಗಾಣದಾದ್ಯಂತ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಟಿಕೆಟ್‌ಗಳನ್ನು ನೀಡಲಾಗುವುದು.

https://twitter.com/SumitkadeI/status/1666776557489381379

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read