ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸಲು ನಟ ರಣಬೀರ್‌ ಇಟ್ಟಿದ್ದಾರೆ ಈ ಷರತ್ತು…!

ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಸದ್ಯ ʼಆನಿಮಲ್‌ʼ ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದಾರೆ. ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆ ಮಾಡಿದ್ದ ಚಿತ್ರ ಈಗ ಒಟಿಟಿನಲ್ಲಿ ಅಬ್ಬರಿಸುತ್ತಿದೆ. ರಣಬೀರ್‌ ಕಪೂರ್‌ ಮೊದಲು ಚಿತ್ರ ಪ್ರಾರಂಭಿಸಿದ್ದು ಸಂಜಯ್‌ ಲೀಲಾ ಬನ್ಸಾಲಿ ಜೊತೆ. ಈಗ 17 ವರ್ಷಗಳ ನಂತ್ರ ಮತ್ತೆ ರಣಬೀರ್‌, ಸಂಜಯ್‌ ಲೀಲಾ ಬನ್ಸಾಲಿ ಜೊತೆ ಚಿತ್ರ ಮಾಡುವ ತಯಾರಿಯಲ್ಲಿದ್ದಾರೆ.

ಕೆಲ ದಿನಗಳ ಹಿಂದೆ ಸಂಜಯ್‌ ಲೀಲಾ ಬನ್ಸಾಲಿ ತಮ್ಮ ಮುಂದಿನ ಚಿತ್ರ ʼಲವ್‌ ಆಂಡ್‌ ವಾರ್‌ʼ ಬಗ್ಗೆ ಮಾತನಾಡಿದ್ದಾರೆ. ರಣಬೀರ್‌ ಕಪೂರ್‌, ಆಲಿಯಾ ಭಟ್‌ ಹಾಗೂ ವಿಕ್ಕಿ ಕೌಶಲ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಬಾರಿ ಸಂಜಯ್‌ ಲೀಲಾ ಬನ್ಸಾಲಿ ಜೊತೆ ಚಿತ್ರ ಮಾಡಲು ಮುಂದಾಗಿರುವ ರಣಬೀರ್‌ ಮೂರು ಷರತ್ತುಗಳನ್ನು ಹಾಕಿದ್ದಾರಂತೆ.

ʼಲವ್ ಆಂಡ್ ವಾರ್ʼ ನಂತರವೂ ಸಾಕಷ್ಟು ಪ್ರಾಜೆಕ್ಟ್‌ ಕೈನಲ್ಲಿರುವ ಕಾರಣ ಚಿತ್ರದ ಚಿತ್ರೀಕರಣವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂಬುದು ಒಂದು. ಶೂಟಿಂಗ್ ನವೆಂಬರ್ 2024 ರಲ್ಲಿ ಪ್ರಾರಂಭವಾಗಿ ಜುಲೈ 2025 ರಲ್ಲಿ ಕೊನೆಗೊಳ್ಳಲಿದೆ. ಇದೇ ವೇಳೆ ರಣಬೀರ್‌, ಚಿತ್ರೀಕರಣದ ಸಮಯ ಅಥವಾ ಗಂಟೆಗಳನ್ನು ನಿಗದಿಪಡಿಸಬೇಕು ಎಂಬ ಷರತ್ತು ಇಟ್ಟಿದ್ದಾರಂತೆ. ಮೂರನೇಯದಾಗಿ ಶಿಸ್ತಿಗೆ ಮಹತ್ವ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆಲಿಯಾ ಭಟ್‌ ಕಾರಣದಿಂದ ಸಂಜಯ್‌ ಲೀಲಾ ಬನ್ಸಾಲಿ ಹಾಗೂ ರಣಬೀರ್‌ ಒಂದಾಗಿದ್ದಾರೆ. ಇಬ್ಬರು ಕುಳಿತು ಮಾತನಾಡುವಂತೆ ಆಲಿಯಾ ಹೇಳಿದ್ದರು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read