ಆಲಿಯಾ ಭಟ್ ಖಾಸಗಿ ಫೋಟೋ ಕ್ಲಿಕ್ ಮಾಡಿದ್ದು ‘ಕೊಳಕು’ ಎಂದ ರಣಬೀರ್; ಕಾನೂನಾತ್ಮಕ ಕ್ರಮದ ಬಗ್ಗೆ ಖಡಕ್ ಮಾತು

ನಟಿ ಆಲಿಯಾ ಭಟ್ ಅವರ ಖಾಸಗಿ ಫೋಟೋವನ್ನ ಇತ್ತೀಚಿಗೆ ಕ್ಲಿಕ್ ಮಾಡಿದ್ದನ್ನ ಗಂಭೀರವಾಗಿ ಪರಿಗಣಿಸಿರುವ ಅವರ ಪತಿ ರಣಬೀರ್ ಕಪೂರ್ ಇದನ್ನು ‘ಕೊಳಕು’ ಎಂದು ಬಣ್ಣಿಸಿದ್ದಾರೆ.

ಪತ್ನಿ ಆಲಿಯಾ ಭಟ್ ಮನೆಯಲ್ಲಿದ್ದಾಗ ಫೋಟೋಗಳನ್ನು ಅವರಿಗೆ ತಿಳಿಯದಂತೆ ಪಾಪರಾಜಿಗಳು ಕ್ಲಿಕ್ ಮಾಡಿದ ಘಟನೆಯ ಬಗ್ಗೆ ನಟ ರಣಬೀರ್ ಕಪೂರ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಘಟನೆಯನ್ನು ಕೊಳಕು ಎಂದು ಕರೆದ ರಣಬೀರ್ ಕಪೂರ್ ಈ ವಿಷಯವನ್ನು ಕಾನೂನುಬದ್ಧವಾಗಿ ಕೊಂಡೊಯ್ಯುವುದಾಗಿ ಹೇಳಿದರು.

ಇದು ಗೌಪ್ಯತೆಯ ಆಕ್ರಮಣವಾಗಿದೆ. ನೀವು ನನ್ನ ಮನೆಯೊಳಗೆ ಶೂಟ್ ಮಾಡಬಾರದು ಮತ್ತು ನನ್ನ ಮನೆಯೊಳಗೆ ಏನು ಬೇಕಾದರೂ ಆಗಬಹುದು, ಅದು ನನ್ನ ಮನೆಯಾಗಿದೆ. ಇದನ್ನು ಸಂಪೂರ್ಣವಾಗಿ ಒಪ್ಪಲಾಗದು. ನಾವು ಇದನ್ನು ವ್ಯವಹರಿಸಲು ಸರಿಯಾದ ಕಾನೂನು ಮಾರ್ಗಗಳ ಮೂಲಕ ಹೋಗುತ್ತಿದ್ದೇವೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ” ಎಂದು ರಣಬೀರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ನಾವು ಪಾಪರಾಜಿಗಳನ್ನು ಗೌರವಿಸುತ್ತೇವೆ. ಪಾಪರಾಜಿಗಳು ನಮ್ಮ ಪ್ರಪಂಚದ ಒಂದು ಭಾಗ ಎಂದು ನಾನು ಭಾವಿಸುತ್ತೇನೆ. ಇದು ಸಹಜೀವನದ ಸಂಬಂಧವಾಗಿದೆ. ಅವರು ನಮ್ಮೊಂದಿಗೆ ಕೆಲಸ ಮಾಡುತ್ತಾರೆ, ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ’. ಆದರೆ ಈ ರೀತಿಯ ವಿಷಯವು ನಿಮ್ಮ ಬೆನ್ನನ್ನು ಗೋಡೆಗೆ ತಳ್ಳುತ್ತದೆ ಮತ್ತು ಯಾರೋ ಹೀಗೆ ಮಾಡುವುದರ ಬಗ್ಗೆ ನಾಚಿಕೆಯಾಗುತ್ತದೆ” ಎಂದು ರಣಬೀರ್ ಹೇಳಿದರು.

ಪಾಪರಾಜಿಗಳು ಆಲಿಯಾರ ಖಾಸಗಿ ಫೋಟೋ ಕ್ಲಿಕ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಅನೇಕ ನಟರು ಆಲಿಯಾ ಬೆಂಬಲಕ್ಕೆ ನಿಂತಿದ್ದಾರೆ. ಅನುಷ್ಕಾ ಶರ್ಮಾ, ಅರ್ಜುನ್ ಕಪೂರ್, ಜಾನ್ವಿ ಕಪೂರ್ ಮತ್ತು ಕರಣ್ ಜೋಹರ್ ಅವರು ಪಾಪರಾಜಿಗಳ ನಡೆಯನ್ನ ಖಂಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read