ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಅವರಗೆ ಅಶ್ಲೀಲ ಸಂದೇಶ ರವಾನಿಸಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಯಾವ ಸ್ಟಾರ್ ನಟನ ಅಭಿಮಾನಿಗಳೇ ಆಗಿರಲಿ, ಕಮೆಂಟ್ ಹಾಕುವ ಮುನ್ನ ಎಚ್ಚರವಿರಬೇಕು. ಅದರಲ್ಲಿಯೂ ಕೆಟ್ಟ ಕಮೆಂಟ್ ಹಾಕುವವರ ವಿರುದ್ಧ ಕ್ರಮವಾಗಬೇಕು. ಯಾವ ಹಿರೋ ಅಭಿಮಾನಿಗಳೇ ಆಗಿರಲಿ ಈ ರೀತಿ ಮಾಡುವುದು ತಪ್ಪು ಎಂದರು.
ಇಲ್ಲಿ ಯಾವ ಸ್ಟಾರ್ ಗಳೂ ಬಂದು ಕಾಪಾಡಲ್ಲ. ಅಭಿಮಾನಿಗಳ ಹೆಸರಲ್ಲಿ ಎಲ್ಲೋ ಇದ್ದುಕೊಂಡು ಕೆಟ್ಟ ಕೆಟ್ಟ ಕಮೆಂಟ್ ಕಳುಹಿಸಿದರೆ ಹೇಗೆ ಸಹಿಸಿಕೊಳ್ಳುವುದು? ಅಂತವರಿಗೆ ತಕ್ಕ ಪಾಠ ಕಲಿಸಬೇಕು. ರಮ್ಯಾ ಕೂಡ ಅಂತವರಿಗೆ ಪಾಠ ಕಲಿಸಲಿ ಎಂದರು.
ನನಗೆ ಸಹ ಕೆಟ್ಟದಾಗಿ ಬೈದು ಕೆಟ್ಟ ಕಮೆಂಟ್ ಗಳನ್ನು ಕಳುಹಿಸುತ್ತಿದ್ದರು. ಟ್ರೋಲ್ ಮಾಡಿ ಬೈಯ್ಯುತ್ತಿದ್ದರು. ಅದಕ್ಕೆ ಪ್ರೂಫ್ ಇದೆ ಎಂಬುದು ಗೊತ್ತಾಗಿ ನಾನು ಕೂಡ ಅಂತವರ ವಿರುದ್ಧ ಕೇಸ್ ಹಾಕಿದೀನಿ. 8-10 ಕೇಸ್ ಹಾಕಿದ್ದೇನೆ. ಹಲವು ವರ್ಷಗಳ ಕಾಲ ಅವರು ಕೋರ್ಟ್ ಗೆ ಅಲಿಬೇಕು. ರಮ್ಯಾ ಅವರಿಗೆ ಕೆಟ್ಟ ಕಮೆಂಟ್ ಹಾಕಿದವರಿಗೂ ಶಿಕ್ಷೆಯಾಗಲಿ. ಅವರೂ ಕೋರ್ಟ್ ಗೆ ಅಲೆಯಲಿ. ಅಂತವರಿಗೂ ಇದೇ ಗತಿ ಆಗಲಿದೆ. ಯಾರೇ ಕೆಟ್ಟದಾಗಿ ಕಮೆಂಟ್ ಹಾಕಿದರೂ ಅವರು ಲೈಫ್ ಲಾಂಗ್ ಕೋರ್ಟ್ ಗೆ ಅಲೆಯಬೇಕು ಎಂದು ಹೇಳಿದ್ದಾರೆ.