ಬೆಂಗಳೂರು: ಧಾರಾವಾಹಿಗಳು ಹಾಗೂ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿರುವ ನಟಿ ರಮೋಲಾ ವಿರುದ್ಧ ಚಿತ್ರತಂಡ ಫಿಲ್ಮ್ ಚೇಂಬರ್ ಗೆ ದೂರು ನೀಡಿದೆ.
ರಮೋಲಾ, ರಿಚ್ಚಿ ಎಂಬ ಚಿತ್ರದಲ್ಲಿ ನಟಿಸಿದ್ದರು. ಸಿನಿಮಾ ಸೆಟ್ಟೇರಿ ಬಹಳ ದಿನಗಳು ಕಳೆದಿವೆ. ಆದರೆ ರಮೋಲಾ ಸಿನಿಮಾ ಪ್ರಮೋಷನ್ ಗೆ ಬರುತ್ತಿಲ್ಲ. ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕರು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.
ರಿಚ್ಚಿ ಸಿನಿಮಾದಲ್ಲಿ ರಮೋಲಾ ನಾಯಕಿಯಾಗಿದ್ದಾರೆ. ಸಿನಿಮಾ ಪ್ರಮೋಷನ್ ಗೆ ಬನ್ನಿ ಎಂದರೆ ಬರುತ್ತಿಲ್ಲ ಎಂದು ಹೇಮಂತ್ ರಿಚ್ಚಿ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.