ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ; ಶಂಕಿತ ಮಸೀದಿ, ಮದರಸಗಳಲ್ಲಿ ಅಡಗಿರುವ ಶಂಕೆ; ವಿ ಹೆಚ್ ಪಿ ಮುಖಂಡ ಶರಣ್ ಪಂಪ್ ವೆಲ್

ಮಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಾಂಬರ್ ಗಾಗಿ ಎನ್ ಐಎ ಹಾಗೂ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಈ ನಡುವೆ ವಿ ಹೆಚ್ ಪಿ ಮುಖಂಡ ಶರಣ್ ಪಂಪ್ ವೆಲ್, ಬಾಂಬ್ ಸ್ಫೋಟದ ಶಂಕಿತ ಮದರಸಗಳಲ್ಲಿ ಅಡಗಿರುವ ಶಂಕೆ ಇದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶರಣ್ ಪಂಪ್ ವೆಲ್, ಶಂಕಿತ ಬಾಂಬರ್ ಭಟ್ಕಳಕ್ಕೆ ಬಂದಿರುವ ಮಾಹಿತಿ ಇದೆ. ಮಸೀದಿ, ಮದರಸಗಳ ಮೇಲೆ ದಾಳಿ ಮಾಡಿದರೆ ಬಾಂಬರ್ ನ ಮಾಹಿತಿ ಸಿಗಬಹುದು ಎಂದು ಹೇಳಿದ್ದಾರೆ.

ಆತ ಶುಕ್ರವಾರ ಬಾಂಬ್ ಬ್ಲಾಸ್ಟ್ ಮಾಡುವಾಗ ಆತನ ಉದ್ದೇಶ ಸ್ಪಷ್ಟವಾಗಿದೆ. ರಾಮೇಶ್ವರಂ ಕೆಫೆ ಹೆಸರಿನ ಕೆಫೆಯನ್ನು ಟಾರ್ಗೆಟ್ ಮಾಡಿದ್ದಾನೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ದಾಳಿ ಮಡಿದ್ದಾನೆ. ಬಾಂಬರ್ ಬಳ್ಳಾರಿ, ಭಟ್ಕಳಕ್ಕೆ ಹೋಗಿರುವ ವಿಡಿಯೋ ವನ್ನು ಎನ್ ಐಎ, ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಾಂಬ್ ಸ್ಫೋಟದ ಬಳಿಕ ಆತ ಮಸೀದಿಗೆ ಹೋಗಿ ಬಟ್ಟೆ ಬದಲಾಯಿಸಿದ್ದಾನೆ ಎನ್ನಲಾಗುತ್ತಿದೆ. ಈ ಮೂಲಕ ಮಸೀದಿ, ಮದರಸಗಳಿಗೆ ಈತನ ಬಗ್ಗೆ ಗೊತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮದರಸಗಳಲ್ಲಿಯೇ ಆತ ಇರಬಹುದು. ಈವರೆಗೂ ಮದರಸಗಳಲ್ಲಿ ತನಿಖೆ ಆಗಿಲ್ಲ. ಕರ್ನಾಟಕದ ಮದರಸಗಳ ಮೇಲೆ ಎನ್ ಐಎ ದಾಳಿ ನಡೆಸಲಿ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read