BIG NEWS: ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಪಾಕಿಸ್ತಾನದ ನಂಟು: NIA ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕಿಸ್ತಾನದ ನಂಟಿದೆ ಎಂಬ ಆತಂಕಕಾರಿ ಮಾಹಿತಿ ಎನ್ ಐಎ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಹಿಂದೆಯೇ ಪ್ರಕರಣ ಸಂಬಂಧ ಎನ್ ಐಎ ಚಾರ್ಜ್ ಶೀಟ್ ಸಲ್ಲಿಇಕೆ ಮಾಡಿತ್ತು ಎನ್ ಐ ಎ ಚಾರ್ಜ್ ಶೀಟ್ ನಲ್ಲಿ ಹಲವು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕಿಸ್ತಾನದ ನಂಟಿದ್ದು, ಪಾಕ್ ಮೂಲದ ಶಂಕಿತ ಉಗ್ರ ಎ6 ಫೈಸಲ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.

ಮಂಘಳೂರು ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ತಾಹಾ ಹಾಗೂ ಶಾಜಿದ್ ನಾಪತ್ತೆಯಾಗಿದ್ದರು. ಕೆಲ ಕಾಲದ ಬಳಿಕ ಮತ್ತೆ ಬೆಂಗಳೂರಿಗೆ ವಾಪಾಸ್ ಆಗಿದ್ದರು. ಆಗ ಮುಜಾಮಿಇಲ್ ಷರೀಪ್ ಜೊತೆ ಪರಿಚಯ ಮಾಡಿಕೊಂಡಿದ್ದರು. ಮುಜಾಮಿಲ್ ಮೆಜೆಸ್ಟಿಕ್ ಬಳಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನ ಮನಪರಿವರ್ತನೆ ಮಾಡಿದ್ದ ತಾಹಾ ಹಾಗೂ ಶಾಜಿದ್ ಐಸಿಸ್ ಗೆ ಸೇರ್ಪಡೆ ಮಾಡಿಸಿದ್ದರು. ಮೊದಲು ಕೆಲ ದುಷ್ಕರ್ತ್ಯಗಳನ್ನು ನಡೆಸಿದ್ದರು.

2023ರಲ್ಲಿ ಬೆಂಗಳುರಿನ ಬಿಜೆಪಿ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. 2024 ಜ.22ರಂದು ಬಿಜೆಪಿ ಕಚೇರಿ ಬಳಿ ಬಂದಾಗ ಭದ್ರತೆ ಹೆಚ್ಚಿದ್ದ ಪರ್ಣಾಮ ಬಾಂಬ್ ಇಡಲು ಸಾಧ್ಯವಾಗದೇ ಕಚೇರ್ ಹಿಂಭಾಗ ಬಾಂಬ್ ಇಟ್ಟು ಟೈಮರ್ ಸೆಟ್ ಮಾಡಿದ್ದ. ಆದರೆ ಅದೃಷ್ಟವಶಾತ್ ಬಾಂಬ್ ಸ್ಫೋಟಗೊಂಡಿಲ್ಲ. ಈ ಪ್ಲಾನ್ ವಿಫಲವಾಗಿದ್ದಕ್ಕೆ ಒಂದೇ ವರದಲ್ಲಿ ಮತ್ತೊಂದು ಬಾಂಬ್ ತಯಾರಿಸಿ ಫೆ.29ರಂದು ಚೆನ್ನೈನಿಇದ ಬೆಂಗಳೂರಿಗೆ ಬಂದಿದ್ದ ಶಾಜಿದ್, ಮಾ.1ರಂದು ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟು ಸ್ಫೋಟಿಸಿದ್ದ. ಈ ಪ್ರಕರಣಕ್ಕೆ ಪಾಕಿಸ್ತಾನದ ನಂಟಿದೆ ಎಂದು ತಿಳಿದುಬಂದಿದೆ. ಎ 6 ಆರೋಪಿ ಫೈಜಲ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read