7 ಬಾರಿ ಗೆದ್ದ ರಮೇಶ್ ಜಿಗಜಿಣಗಿ, 5 ಬಾರಿ ಗೆದ್ದ ಗದ್ದಿಗೌಡರ್ ಗೆ ಈ ಬಾರಿಯೂ ಸಿಗದ ಸಚಿವ ಸ್ಥಾನ

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ದಾಖಲೆಯ 7 ಬಾರಿ ಮತ್ತು 5 ಬಾರಿ ಜಯಗಳಿಸಿದ ರಮೇಶ ಜಿಗಜಿಣಗಿ ಮತ್ತು ಪಿ.ಸಿ. ಗದ್ದಿಗೌಡರ ಅವರಿಗೆ ಈ ಬಾರಿಯೂ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ.

ಜನತಾ ಪರಿವಾರದ ಹಿನ್ನೆಲೆಯ ಈ ಇಬ್ಬರು ಸಂಸದರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಪಿ.ಸಿ. ಗದ್ದಿಗೌಡರ ಅವರು ಸತತ 5 ಬಾರಿ ಜಯಗಳಿಸಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 3 ಬಾರಿ, ನಂತರ ವಿಜಯಪುರ ಮೀಸಲು ಕ್ಷೇತ್ರದಲ್ಲಿ 4 ಬಾರಿ ಸೇರಿ ಸತತ 7 ಬಾರಿ ಜಯಗಳಿಸಿರುವ ರಮೇಶ ಜಿಗಜಿಣಗಿ ಅವರಿಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರೆಯದಿರುವುದು ಬೆಂಬಲಿಗರಲ್ಲಿ ನಿರಾಸೆ ತಂದಿದೆ

ಮುಖ್ಯಮಂತ್ರಿಯಾಗಿದ್ದ ದಿ. ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರಮೇಶ ಜಿಗಜಿಣಗಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೋದಿ ನೇತೃತ್ವದ 1.0 ಸರ್ಕಾರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವರಾಗಿ ಜಿಗಜಿಣಗಿ ಕಾರ್ಯನಿರ್ವಹಿಸಿದ್ದರು. ಸತತ 5 ಬಾರಿ ಜಯಗಳಿಸಿದ ಗದ್ದಿಗೌಡರ ಅವರಿಗೆ ಒಂದು ಬಾರಿಯೂ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read