SHOCKING NEWS: ತೆಂಗಿನ ಕಾಯಿ ಎಂದು ಎತ್ತಿಕೊಳ್ಳುತ್ತಿದ್ದಂತೆ ಸ್ಫೋಟಗೊಂಡ ನಾಡಬಾಂಬ್

ರಾಮನಗರ: ತೆಂಗಿನ ಕಾಯಿ ಎಂದು ಎತ್ತಿಕೊಳ್ಳಲು ಹೋಗುತ್ತಿದ್ದಂತೆ ನಾಡಬಾಂಬ್ ಸ್ಫೋಟಗೊಂಡ ಘಟನೆ ರಾಮನಗರ ಜಿಲ್ಲೆಯ ನೇರಳಕಟ್ಟಿ ಗ್ರಾಮದಲ್ಲಿ ನಡೆದಿದೆ.

ನಾಡಬಾಂಬ್ ಸ್ಫೋಟದಲ್ಲಿ ನೌಷಾದ್ ಪಾಷಾ (29) ಎಂಬುವವರು ಗಾಯಗೊಂಡಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾರೋ ಮಾಟ-ಮಂತ್ರ ಮಾಡಿ ತೆಂಗಿನ ಕಾಯಿ ಇಟ್ಟಿರಬೇಕು ಎಂದು ನೌಷಾದ್ ಪಾಷಾ ಎಬುವವರು ಪರಿಶೀಲಿಸುತ್ತಿದ್ದರು. ಈ ವೇಳೆ ಏಕಾಏಕಿ ಅದು ಸ್ಫೋಟಗೊಂಡಿದೆ.

ಕಾಡುಹಂದಿ ಓಡಿಸಲೆಂದು ಇಟ್ಟಿರಬಹುದು ಎಂದು ಶಮ್ಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read