ರಾಮನಗರ: 10 ಕ್ವಿಂಟಾಲ್ ಗೋಧಿ ಮಣ್ಣುಪಾಲು ಮಾಡಿದ್ದ ಬಿಸಿಎಂ ಹಾಸ್ಟೆಲ್ ವಾರ್ಡನ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಮನಗರದ ಬಿಸಿಎಂ ಹಾಸ್ಟೆಲ್ ವಾರ್ಡನ್ ಯೋಗೀಶ್ ಅಮಾನತುಗೊಂಡವರು. ಬೆಂಗಳೂರು ದಕ್ಷಿಣ ಡಿಸಿ ಯಶವಂತ್ ಗುರುಕರ್ ಯೋಗೀಶ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
10 ಕ್ವಿಂಟಾಲ್ ಗೋಧಿಯನ್ನು ಹಾಸ್ಟೆಲ್ ಹಿಂಭಾಗದಲ್ಲಿ ಗುಂಡಿ ತೋಡಿ ಗೋಧಿ ಸುರಿದು ಮಣ್ಣು ಮುಚ್ಚಿಸಿದ್ದ. ಈ ಬಗ್ಗೆ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿ, ಯೋಗೀಶ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.