ಬೆಂಗಳೂರು: ಇಡೀ ದೇಶದಲ್ಲಿ ಮತಗಳ್ಳತನ ನಡೆದಿದೆ. ಚುನಾವಣ ಅಆಯೋಗದಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಇಡೀ ದೇಶದಲ್ಲಿ ವೋಟ್ ಚೋರಿ ನಡೆದಿದೆ. ಲೋಕಸಭಾ ಚುನಾವಣೆ ವೇಳೆ ಮೂರನೇ ಎಲೆಕ್ಷನ್ ಹೊತ್ತಿಗೆ ಬಿಜೆಪಿಯ ಪಾಪ್ಯುಲಾರಿಟಿ ಕಡಿಮೆಯಾಯಿತು. ಹೀಗಾಗಿ ಗೆಲ್ಲೋಕೆ ದೇಶದ ಎಲ್ಲಾ ಭಾಗಗಳಲ್ಲಿ ಮತ ತೆಗೆಯೋ ಕೆಲಸ ಮಾಡಿದ್ದಾರೆ. ಇಂತಹ ಮತ ಅಕ್ರಮ ದೇಶದ ಎಲ್ಲೆಡೆ ನಡೆಯುತ್ತಿದೆ. ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.
ನಮಗೆ ಎಲೆಕ್ಷನ್ ಕಮಿಷನ್ ನಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಸುಪ್ರೀಂ ಕೋರ್ಟ್ ಗೆ ಹೋಗಬೇಕು ಅಷ್ಟೇ ಎಂದರು. ಎಲೆಕ್ಷನ್ ಕಮಿಷನ್ ಕೇಂದ್ರದ ಕೈಗೊಂಬೆಯಂತಾಗಿದೆ. ಮೋದಿ, ಅಮಿತ್ ಶಾ ಹೇಳಿದ್ದಕ್ಕೆ ಮುದ್ರೆ ಒತ್ತುತ್ತಾರೆ. ಕಾಂಗ್ರೆಸ್ ಎಲ್ಲಿ ಪ್ರಬಲವಾಗಿದೆ ಅಲ್ಲಿ ಅಕ್ರಮ ಮಾಡುತ್ತಿದ್ದಾರೆ. ಮತ ತೆಗೆಯೋದು ಮಾತ್ರವಲ್ಲ ಸೇರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 40-50 ಲಕ್ಷ ಮತ ಸೇರ್ಪಡೆ ಮಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆಯನ್ನು ಬಿಜೆಪಿ ಮೋಸದಿಂದ ಗೆದ್ದಿದೆ. ಆಳಂದ, ಗಾಂಧಿನಗರ ಹೀಗೆ ಹಲವೆಡೆ ನಡೆದಿದೆ ಎಂದರು.