ಬೆಂಗಳೂರು: ಸಚಿವ ಸ್ಥಾನ ಬೇಕು ಎಂದು ನಾನು ದೆಹಲಿಗೆ ಹೋಗಿಲ್ಲ. ಮುಂದೆ ಹೋಗುವುದೂ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ದೆಹಲಿ ಪ್ರವಾಸದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನಾನು ಅಧಿಕಾರ ಬೇಕು ಅಂತಾ ದೆಹಲಿಗೆ ಹೋಗಿಲ್ಲ. ಎರಡು ವರ್ಷಗಳಲ್ಲಿ ನಾನು ದೆಹಲಿಗೆ ಹೋಗಿರುವುದು ಕೇವಲ ಎರಡು ಬಾರಿ. ಅದು ಇಲಾಖೆ ಕಾರ್ಯಕ್ರಮಗಳಿಗೆ. ನಾನು ಯಾವತ್ತೂ ಸ್ಥಾನಮಾನ ಬೇಕು ಎಂದು ದೆಹಲಿಗೆ ಹೋದವನಲ್ಲ ಎಂದರು.
ಸಚಿವ ಸ್ಥಾನಕ್ಕಾಗಿ ನಾನು ಪ್ರಭಾವ ಬೀರಲ್ಲ. ಅರ್ಹತೆ ಇದ್ದರೆ ಕೊಡ್ತಾರೆ, ಇಲ್ಲದಿದ್ದರೆ ಇಲ್ಲ ಎಂದು ಹೇಳಿದರು.
ಇನ್ನು ಬಿಜೆಪಿಯವರು 2014ರಿಂದಲೂ ವೋಟ್ ಚೋರಿ ಮಾಡುತ್ತಿದ್ದಾರೆ. ಬಿಜೆಪಿಯವರ ವೋಟ್ ಚೋರಿ ಹೊಸದೇನಲ್ಲ. ಎಲ್ಲಾ ಚುನಾವಣೆಗಳಲ್ಲಿಯೂ ಬಿಇಜೆಪಿ ಕುತಂತ್ರ ಮಾಡಿದೆ. ಕೇಂದ್ರ ಚುನಾವಣಾ ಆಯೋಗವೂ ಬಿಜೆಪಿ ಜೊತೆ ಶಾಮೀಲಾಗಿದೆ ಎಂದರು.
You Might Also Like
TAGGED:ರಾಮಲಿಂಗಾರೆಡ್ಡಿ
