
ನೇಪಾಳದಿಂದ ತರಲಾದ ಪವಿತ್ರ ಸಾಲಿಗ್ರಾಮ ಶಿಲೆಯಿಂದ ದೇವಾಲಯದ ಮುಖ್ಯ ದೇವರನ್ನು ಕೆತ್ತಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇನ್ನೂ ನಿರ್ಧಾರ ಕೈಗೊಂಡಿಲ್ಲ.
ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ, ದೇವರು ಹೇಗೆ ನಿಖರವಾಗಿ ಕಾಣುತ್ತದೆ ಎಂಬುದನ್ನು ಟ್ರಸ್ಟ್‌ನ ಸದಸ್ಯರು ಮೊದಲು ನಿರ್ಧರಿಸಬೇಕು. ಅಲ್ಲಿ ಈಗಾಗಲೇ ಒಂದು ರಾಮ್ ಲಲ್ಲಾ ವಿಗ್ರಹವಿದೆ, ಆದರೆ ಮೂಲ ವಿಗ್ರಹದ ಹಿಂದೆ ನಮಗೆ ಇನ್ನೊಂದು ದೇವತೆ ಇರಬೇಕು. ಆ ದೇವರ ವಿಗ್ರಹವು ಕನಿಷ್ಠ 25 ಅಡಿ ದೂರದಿಂದ ದರ್ಶನಕ್ಕೆ ಲಭ್ಯವಿರಬೇಕು ಎಂದು ಹೇಳಿದ್ದಾರೆ.
ಎರಡು ವೈಶಿಷ್ಟ್ಯಗಳು ಬಹಳ ಮುಖ್ಯ. ಭಕ್ತನು ತನ್ನ ಭಗವಂತನನ್ನು ನೋಡಿದಾಗ, ದೇವರ ಕಣ್ಣುಗಳು, ಚರಣಗಳನ್ನು ಕಾಣಲು ಬಯಸುತ್ತಾನೆ. ನಾಲ್ಕು ಮೂಲ ಮಾದರಿಗಳನ್ನು ರಚಿಸಲಾಗುತ್ತಿದೆ. ಡಾಲಮೈಟ್ ನಲ್ಲಿ, ನೀಲಿ ಛಾಯೆಯೊಂದಿಗೆ ಅಮೃತಶಿಲೆಯಲ್ಲಿ, ಒಡಿಶಾದಿಂದ ಮತ್ತೊಂದು ಕಲ್ಲು ಬಳಸಿ ಮತ್ತು ಸಾಲಿಗ್ರಾಮ ಶಿಲೆ ಬಳಸಿ ರಚಿಸಲಾಗುತ್ತಿದೆ. ಮೈಸೂರು ಮೂಲದ ಕಲ್ಲುಗಳ ಸೂಕ್ತತೆ ಕುರಿತು ತಜ್ಞರ ಅಭಿಪ್ರಾಯವನ್ನೂ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಡಿಸೆಂಬರ್ 2023 ರೊಳಗೆ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲು ಟ್ರಸ್ಟ್ ವೇಳಾಪಟ್ಟಿಯನ್ನು ರೂಪಿಸಿದೆ. ಗರ್ಭ ಗೃಹ ಮತ್ತು ಪ್ರಾಣಪ್ರತಿಷ್ಠಾ(ದೇವತೆಯ ಪ್ರತಿಷ್ಠಾಪನೆ) ಹೊಂದಿರುವ ನೆಲ ಮಹಡಿಯು ಪ್ರತಿಮಾಶಾಸ್ತ್ರ ಹೊರತುಪಡಿಸಿ ಪೂರ್ಣಗೊಳ್ಳುತ್ತದೆ. ಆ ದಿನಾಂಕದೊಳಗೆ ಭಕ್ತರು ಗರ್ಭಗೃಹದಲ್ಲಿ ಸ್ವಾಮಿಯ ದರ್ಶನ ಪಡೆಯುತ್ತಾರೆ ಎಂದು ಆಶಿಸುತ್ತೇವೆ ಎಂದು ಮಿಶ್ರಾ ಹೇಳಿದ್ದಾರೆ.
