ಇತ್ತೀಚಿಗಷ್ಟೇ ತನ್ನ ಟ್ರೈಲರ್ ನಿಂದ ಎಲ್ಲರ ಗಮನ ಸೆಳೆದಿದ್ದ, ರಾಮ್ ಪೋತಿನೇನಿ ನಟನೆಯ ‘ಡಬಲ್ ISMART’ ಚಿತ್ರ ನಾಳೆ ವಿಶ್ವಾದ್ಯಂತ ತೆರೆಕಣಲಿದೆ, ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ರಾಮ್ ಪೋತಿನೇನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ದತ್, ಕಾವ್ಯಾ ಥಾಪರ್, ಸಯಾಜಿ ಶಿಂಧೆ, ಬಾನಿ ಜೆ, ಗೆಟಪ್ ಶ್ರೀನು, ಮಕರಂದ್ ದೇಶಪಾಂಡೆ, ಝಾನ್ಸಿ, ಪ್ರಗತಿ, ಬಣ್ಣ ಹಚ್ಚಿದ್ದಾರೆ. ಮಣಿ ಶರ್ಮ ಸಂಗೀತ ಸಂಯೋಜನೆ ನೀಡಿದ್ದು, ಪೂರಿ ಕಲೆಕ್ಟ್ಸ್ ಬ್ಯಾನರ್ ನಡಿ ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ ಶ್ರೀನಿವಾಸ್ ಸಂಕಲನ, ಸ್ಯಾಮ್ ಕೆ ನಾಯ್ಡು ಛಾಯಾಗ್ರಹಣವಿದೆ.