‘ಭಾರತ್ ದಿವಸ್’ ಪರೇಡ್ ನಲ್ಲಿ ರಾಮಮಂದಿರ ಟ್ಯಾಬ್ಲೋ; ಅಮೆರಿಕಾದಲ್ಲೂ ಸದ್ದು ಮಾಡಲಿದೆ ಅಯೋಧ್ಯಾ ನಗರಿ

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೆರಿಕದಲ್ಲಿ ಪರೇಡ್ ನಡೆಯಲಿದೆ. ನ್ಯೂಯಾರ್ಕ್‌ ನಲ್ಲಿ  ಭಾರತ್‌  ದಿವಸ್‌ ಅಂಗವಾಗಿ ಆಗಸ್ಟ್ 18 ರಂದು ನಡೆಯಲಿರುವ ಮೆರವಣಿಗೆಯಲ್ಲಿ ಜನರು ವಿಶೇಷ ಟ್ಯಾಬ್ಲೋವನ್ನು ನೋಡಲಿದ್ದಾರೆ. ಈ ಮೆರವಣಿಗೆಯಲ್ಲಿ ರಾಮಮಂದಿರದ ಪ್ರತಿಕೃತಿಯನ್ನು ಪ್ರದರ್ಶಿಸಲಾಗುವುದು.

ಖ್ಯಾತ ಭಾರತೀಯ ನಟ ಪಂಕಜ್ ತ್ರಿಪಾಠಿ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೆರವಣಿಗೆಯು ನ್ಯೂಯಾರ್ಕ್ ನಗರದ ಪ್ರಸಿದ್ಧ ಮ್ಯಾಡಿಸನ್ ಅವೆನ್ಯೂ ಮೂಲಕ ಹಾದುಹೋಗುತ್ತದೆ. ಸಾವಿರಾರು ಭಾರತೀಯ ವಲಸಿಗರಿಗೆ ಇದನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಪ್ರತಿ ವರ್ಷ ಇಂಡಿಯಾ ಡೇ ಪರೇಡ್ ಅನ್ನು ಆಯೋಜಿಸುತ್ತದೆ. ಇದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಹೊರಗೆ ನಡೆದ ಅತಿ ದೊಡ್ಡ ಕಾರ್ಯಕ್ರಮ ಎಂದು ಪರಿಗಣಿಸಲಾಗಿದೆ. ಮೆರವಣಿಗೆಯು ವಿವಿಧ ಭಾರತೀಯ-ಅಮೇರಿಕನ್ ಸಮುದಾಯಗಳನ್ನು ಪ್ರತಿನಿಧಿಸುವ ಡಜನ್‌ ಗಟ್ಟಲೆ ಫ್ಲೋಟ್‌ಗಳನ್ನು ಒಳಗೊಂಡಿರುತ್ತದೆ.

ಈ ಬಾರಿಯ ಪರೇಡ್ ನ ವಿಷಯ ವಸುಧೈವ ಕುಟುಂಬಕಂ ಆಗಿದೆ. ಈ ವರ್ಷ ಮೆರವಣಿಗೆಯು 18 ಅಡಿ ಉದ್ದ, ಒಂಬತ್ತು ಅಡಿ ಅಗಲ ಮತ್ತು ಎಂಟು ಅಡಿ ಎತ್ತರದ ರಾಮಮಂದಿರದ ಭವ್ಯವಾದ ಪ್ರತಿಕೃತಿಯನ್ನು ಒಳಗೊಂಡಿರುತ್ತದೆ. ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ರಾಮಮಂದಿರದ ಪ್ರತಿಕೃತಿಯನ್ನು ಪ್ರದರ್ಶಿಸಲಾಗುವುದು. ಈ ಹೆಜ್ಜೆ ಭಾರತೀಯ ಸಮುದಾಯಕ್ಕೆ ಐತಿಹಾಸಿಕ ಕ್ಷಣವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read