ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಮುನ್ನ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಜನಪ್ರಿಯ ಹಾಡಿನ ರಾಮ್ ಆಯೇಂಗೆಯ ಆಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.
ಹಲವಾರು ಗಾಯಕರು ರಾಮ್ ಭಜನೆಗಳು ಮತ್ತು ಹಾಡುಗಳೊಂದಿಗೆ ಗಮನಸೆಳೆದಿದ್ದಾರೆ. ಇದರ ಮಧ್ಯೆ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ AI- ರಚಿತವಾದ ಹಾಡು ನೆಟಿಜನ್ ಗಳ ಮನಸೂರೆಗೊಂಡಿದೆ.
ಬಳಕೆದಾರರು ತಮ್ಮ ಅಧಿಕೃತ X ಖಾತೆಯಲ್ಲಿ ಆಡಿಯೋವನ್ನು ಹಂಚಿಕೊಂಡಿದ್ದು, “ಇದುವರೆಗೆ ಕೃತಕ ಬುದ್ದಿಮತ್ತೆಯ ಅತ್ಯಂತ ಸೂಕ್ತವಾದ ಬಳಕೆ” ಎಂದು ಬರೆದಿದ್ದಾರೆ.
ಮತ್ತೊಬ್ಬರು, ಲತಾ ಜಿ ಅವರ ಧ್ವನಿಯಲ್ಲಿ ಈ ಹಾಡನ್ನು ಕೇಳಿದ ನಂತರ ನನ್ನ ಕಣ್ಣುಗಳು ತುಂಬಿವೆ ಮತ್ತು ನನ್ನ ಮನಸ್ಸು ಸಂಪೂರ್ಣ ಶಾಂತವಾಗಿದೆ ಎಂದು ಹೇಳಿದ್ದಾರೆ.
The most appropriate use of AI so far… pic.twitter.com/ClkDSF9e6u
— Ranvijay Singh (@ranvijayT90) January 20, 2024
https://youtu.be/FTInvLxuWQE