ಯಾವುದೀ ಬಾಂಧವ್ಯ…..ಅಪರೂಪದ ಸಹೋದರನ ಪ್ರೀತಿಗೆ ಭಾವುಕಳಾದ ಅಕ್ಕ…. ಹೃದಯಸ್ಪರ್ಶಿ ವಿಡಿಯೋ ವೈರಲ್

ಮೈಸೂರು: ಸ್ವಂತ ಅಣ್ಣ-ತಂಗಿ, ಅಕ್ಕ-ತಮ್ಮನೇ ಆಗಬೇಕೆಂದೇನೂ ಇಲ್ಲ, ಭ್ರಾತೃತ್ವದ ಮಹತ್ವ ಸಾರುವ ರಕ್ಷಾ ಬಂಧನ ಹಬ್ಬ ಜನುಜನುಮದ ಅನುಬಂಧವನ್ನು ಸಾರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಅಪರೂಪದ ಸಹೋದರ-ಸಹೋದರಿಯ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದು ಹೃದಯಸ್ಪರ್ಶಿಯಾಗಿದೆ.

ರಾಖಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರ ಅಂಗಡಿಗೆ ಬರುವ ವ್ಯಕ್ತಿಯೋರ್ವ ರಾಖಿ ಖರೀದಿಸಿ ಬಳಿಕ ಅಕ್ಕ, ಈ ರಾಖಿಯನ್ನು ಕೈಗೆ ಕಟ್ಟುತ್ತೀರಾ ಎಂದು ಕೇಳಿದ್ದಾನೆ. ಅಚ್ಚರಿಗೊಂಡ ಮಹಿಳೆ ಸಂತೋಷದಿಂದ ರಾಖಿ ಕಟ್ಟುತ್ತಾರೆ. ಅಲ್ಲದೇ ಸ್ವೀಟ್ ಬಾಕ್ಸ್, ಹಣವನ್ನು ಕೂಡ ಸಹೋದರ ಪ್ರೀತಿಯ ಅಕ್ಕನಿಗೆ ನೀಡಿದ್ದಾನೆ. ಅಂಗಡಿಯ ಪಕ್ಕದಲ್ಲೇ ಕುಳಿತು ತಿಂಡಿ ತಿನ್ನುತ್ತಿದ್ದ ಮಹಿಳೆಯ ಮಗುವಿಗೆ ನೋಟ್ ಬುಕ್, ಪೆನ್ ಗಳನ್ನು ಗಿಫ್ಟ್ ನೀಡಿ ತೆರಳಿದ್ದಾನೆ. ‘ಮೈಸೂರು ಸುದ್ದಿ’ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಗುರುತು ಪರಿಚಯ ಇಲ್ಲದ ಸಹೋದರ – ಸಹೋದರಿಯ ಬಾಂಧವ್ಯದ ವಿಡಿಯೋ ಎಂತವರನ್ನೂ ಭಾವುಕರನ್ನಾಗಿಸುವಂತಿದೆ.

https://youtu.be/4Nx5xSauRNo?si=C9hsmWArmrtHbGEU

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read