BIG NEWS: ನಟಿ ರಾಖಿ ಸಾವಂತ್ ಗೆ ಕ್ಯಾನ್ಸರ್; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಮಾಜಿ ಪತಿ…!

ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಹೆಸರಾಗಿರುವ ರಾಖಿ ಸಾವಂತ್, ಬಿಗ್ ಬಾಸ್ ನಲ್ಲಿ ಪಾಲ್ಗೊಂಡ ಬಳಿಕ ಮತ್ತಷ್ಟು ಪ್ರಸಿದ್ಧಿಯಾಗಿದ್ದರು. ಕೆಲದಿನಗಳ ಹಿಂದಷ್ಟೇ ಟವೆಲ್ ಧರಿಸಿ ಉರ್ಫಿ ಜಾವೇದ್ ಳನ್ನು ಅಣಕಿಸಿದ್ದ ರಾಖಿ ಸಾವಂತ್ ಇದೀಗ ಆಸ್ಪತ್ರೆಯಲ್ಲಿದ್ದಾರೆ.

ರಾಖಿ ಸಾವಂತ್ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆದರೆ ಈವರೆಗೆ ರಾಖಿಯ ಹಲವು ಗಿಮಿಕ್ ಗಳನ್ನು ನೋಡಿದ್ದ ಸಿನಿಪ್ರಿಯರು ಇದು ಕೂಡ ಒಂದು ಗಿಮಿಕ್ ಎಂದು ಭಾವಿಸಿದ್ದರು. ಇದೀಗ ರಾಖಿ ಸಾವಂತ್ ಮಾಜಿ ಪತಿ ರಿತೇಶ್ ಸಿಂಗ್ ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ರಿತೇಶ್ ಸಿಂಗ್, ರಾಖಿ ಸಾವಂತ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಮೂತ್ರಕೋಶದಲ್ಲಿ ಗಡ್ಡೆ ಪತ್ತೆಯಾಗಿದ್ದು, ಇದು ಕ್ಯಾನ್ಸರ್ ಇರಬಹುದು ಎಂದು ವೈದ್ಯರು ಶಂಕಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಾರಿ ರಾಖಿ ಯಾವುದೇ ನಟನೆ ಮಾಡುತ್ತಿಲ್ಲ. ಆಕೆ ನಿಜಕ್ಕೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಅಭಿಮಾನಿಗಳು ಆಕೆ ಶೀಘ್ರದಲ್ಲಿ ಗುಣಮುಖವಾಗಿ ಬರಲಿ ಎಂದು ಪ್ರಾರ್ಥಿಸಬೇಕು ಎಂದು ರಿತೇಶ್ ಸಿಂಗ್ ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read