
ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಕ್ಷನ್ ಥ್ರಿಲ್ಲರ್ ‘ಜೈಲರ್’ ಆ. 4 ರಂದು ತೆರೆಗೆ ಬರಲಿದೆ. ರಜನಿಕಾಂತ್ ನಿವೃತ್ತ ಪೋಲೀಸ್ ಮತ್ತು ಜೈಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೊಸ ಪೋಸ್ಟರ್‌ನಲ್ಲಿ, ರಜನಿಕಾಂತ್ ಮತ್ತು ಶಿವ ರಾಜ್‌ಕುಮಾರ್ ಒಂದೇ ಕಪ್ಪು ಮತ್ತು ಬಿಳಿ ಚೌಕಟ್ಟಿನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್ ಸನ್ ಪಿಕ್ಚರ್ ನ ‘ಎಕ್ಸ್’ ಹ್ಯಾಂಡಲ್ ನಲ್ಲಿ ಸೂಪರ್ ಸ್ಟಾರ್ – ಶಿವಣ್ಣ ಎಂಬ ಶೀರ್ಷಿಕೆಯೊಂದಿಗೆ ಹೊರಬಂದಿದೆ. ಮೊದಲ ಬಾರಿಗೆ ಅವರನ್ನು ಒಟ್ಟಿಗೆ ವೀಕ್ಷಿಸಲು ಸಿದ್ಧರಾಗಿ. ಜೈಲರ್‌ಗೆ ಇನ್ನೂ 4 ದಿನಗಳು ಎಂದು ಟ್ವೀಟ್ ಮಾಡಲಾಗಿದೆ.
‘ಜೈಲರ್’ ಚಿತ್ರದ ಟ್ರೇಲರ್‌ನಲ್ಲಿ ರಜನಿಕಾಂತ್ ಸಂಪೂರ್ಣ ‘ಕಬಾಲಿ’ ಮೋಡ್ ನಲ್ಲಿ ಕಾಣಿಸಿದ್ದಾರೆ, ಚಿತ್ರದಲ್ಲಿ ಶಿವರಾಜ್ ಕುಮಾರ್ ನರಸಿಂಹ ಪಾತ್ರವನ್ನು ನಿರ್ವಹಿಸಿದರೆ, ಮೋಹನ್ ಲಾಲ್ ಮ್ಯಾಥ್ಯೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಅವರ ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಡಲಾಗಿದೆ.
ಆಗಸ್ಟ್ 10 ರಂದು ‘ಜೈಲರ್’ ಚಿತ್ರಮಂದಿರಕ್ಕೆ ಬರಲಿದೆ. ಚಿತ್ರದ ಕುರಿತಾಗಿ ಕುತೂಹಲ ಹೆಚ್ಚಾಗಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಜೋರಾಗಿದೆ.
https://twitter.com/Jailer_Movie/status/1688063093363167232

 
		 
		 
		 
		 Loading ...
 Loading ... 
		 
		 
		