ಸೇನಾ ಯೋಧರೊಂದಿಗೆ ರಾಜನಾಥ್ ಸಿಂಗ್ ವಿಜಯದಶಮಿ ಆಚರಣೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಡಾರ್ಜಿಲಿಂಗ್‌ ಸುಕ್ನಾ ಕ್ಯಾಂಟ್‌ನಲ್ಲಿ ಸೇನಾ ಯೋಧರೊಂದಿಗೆ ವಿಜಯ ದಶಮಿ ಆಚರಿಸಿದ್ದು, ಶಸ್ತ್ರಪೂಜೆಯನ್ನೂ ಮಾಡಿದ್ದಾರೆ.

ಪೂಜೆ ಸಂದರ್ಭದಲ್ಲಿ ಅವರು ವಾಹನಗಳಿಗೆ ಪೂಜೆ ನೆರವೇರಿಸಿ ಯೋಧರ ಹಣೆಗೆ ತಿಲಕವಿಟ್ಟರು. ಆಯುಧ ಪೂಜೆ, ವಿಜಯದಶಮಿಯಂದು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆಲ್ಲ ಶುಭಾಶಯಗಳು. ಶಸ್ತ್ರಗಳನ್ನು ಗೌರವದಿಂದ ಪರಿಗಣಿಸಲ್ಪಡುವ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ. ಇದು ಒಂದು ಸಣ್ಣ ವಿಷಯವಾಗಿ ಕಾಣುತ್ತದೆ. ಆದರೆ ವಾಸ್ತವದಲ್ಲಿ, ಅದನ್ನು ಬಳಸುವ ಮೊದಲು ನಾವು ಪೂಜಿಸುವ ಗೌರವಿಸುವ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ದೇಶದ ಎಲ್ಲಾ ವೃತ್ತಿಪರರು ವರ್ಷವಿಡೀ ಒಮ್ಮೆ ತಮ್ಮ ಶಸ್ತ್ರ, ಪರಿಕರ, ವಾದ್ಯಗಳನ್ನು ಪೂಜಿಸುವುದನ್ನು ನೀವೆಲ್ಲರೂ ನೋಡಿರಬಹುದು. ದೀಪಾವಳಿ ಮತ್ತು ವಸಂತ ಪಂಚಮಿಯಂದು ವಿದ್ಯಾರ್ಥಿಗಳು ತಮ್ಮ ಶಾಯಿ ಮತ್ತು ಪುಸ್ತಕಗಳನ್ನು ಪೂಜಿಸುತ್ತಾರೆ. ಸಂಗೀತಗಾರರು ತಮ್ಮ ಸಂಗೀತ ವಾದ್ಯಗಳನ್ನು ಪೂಜಿಸುತ್ತಾರೆ. ನಮ್ಮ ದೇಶದ ಹಲವಾರು ಕುಟುಂಬಗಳು ರೈತ ಕುಟುಂಬಗಳೊಂದಿಗೆ ಸಂಬಂಧ ಹೊಂದಿವೆ. ಶಸ್ತ್ರಪೂಜೆ ಎಂದರೆ ಕೇವಲ ನಮ್ಮ ವಾದ್ಯಗಳನ್ನು ಪೂಜಿಸುವುದಲ್ಲ, ನಮ್ಮ ಕೆಲಸದ ಬಗೆಗಿನ ಗೌರವವೂ ಆಗಿದೆ ಎಂದು ಹೇಳಿದ್ದಾರೆ.

https://twitter.com/ANI/status/1844964992539676958

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read