ನವದೆಹಲಿ : ಸೂಪರ್ ಸ್ಟಾರ್ ರಜನಿಕಾಂತ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಅವರಿಗೆ ನಮಸ್ಕರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೊ ವೈರಲ್ ಆಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಗೌರವ ತೋರಿಸಿದ್ದಕ್ಕಾಗಿ ಒಂದು ವರ್ಗ ಅವರನ್ನು ಟೀಕಿಸಿದರೆ, ಮತ್ತೊಂದು ವರ್ಗವು ಹಿಂದೂ ಸಂತನಿಗೆ ಗೌರವ ತೋರಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿತು.
ನಟ ತಮ್ಮ ಚಿತ್ರ ‘ಜೈಲರ್’ ಬಿಡುಗಡೆಯಾದ ನಂತರ ಹಿಮಾಲಯದ ಹೃಷಿಕೇಶಕ್ಕೆ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಇನೋವಾ ಕಾರಿನ ಮೂಲಕ ಆಗಮಿಸಿದ ರಜನಿಕಾಂತ್ ಸ್ವಾಗತಿಸಲು ಯೋಗಿ ಆದಿತ್ಯನಾಥ್ ತಮ್ಮ ನಿವಾಸದಿಂದ ಹೊರಬಂದಿದ್ದಾರೆ. ಯೋಗಿ ಆದಿತ್ಯನಾಥ್ ರಜನಿಕಾಂತ್‌ಗೆ ಹೂಗುಚ್ಚ ನೀಡಿ ಸ್ವಾಗತ ನೀಡಿದರು.
#WATCH | Actor Rajinikanth meets Uttar Pradesh CM Yogi Adityanath at his residence in Lucknow pic.twitter.com/KOWEyBxHVO
— ANI (@ANI) August 19, 2023