ಮುಂಬೈನಲ್ಲಿ ಭಾರತ -ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ವೀಕ್ಷಿಸಿದ್ದಾರೆ.

ಅವರು ಪಂದ್ಯ ವೀಕ್ಷಿಸಿರುವುದು ಅಪರೂಪವಾಗಿದೆ. ಪಂದ್ಯವನ್ನು ವೀಕ್ಷಿಸಲು ಅವರನ್ನು ಆಹ್ವಾನಿಸಿದ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಅವರೊಂದಿಗೆ ರಜನಿಕಾಂತ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. 2011 ರ ವಿಶ್ವಕಪ್ ನಂತರ ಮುಂಬೈನಲ್ಲಿ ರಜನಿಕಾಂತ್ ಅವರು ಮೊದಲ ಬಾರಿಗೆ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ವಾಂಖೆಡೆ ಸ್ಟೇಡಿಯಂನ ಐಷಾರಾಮಿ ಬೂತ್‌ ನಲ್ಲಿ ರಜನಿಕಾಂತ್ ಜೊತೆಗೆ ಕುಳಿತಿರುವ ಚಿತ್ರದೊಂದಿಗೆ ಅಮೋಲ್ ಕಾಳೆ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿ ಪಂದ್ಯ ವೀಕ್ಷಿಸಲು ರಜನಿಕಾಂತ್ ಗೆ ಆಹ್ವಾನ ನೀಡಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.

ಬಿಳಿ ಪೊಲೊ ಶರ್ಟ್ ಜೊತೆಗೆ ಕಪ್ಪು ಪ್ಯಾಂಟ್ ಮತ್ತು ಅವರ ಸಿಗ್ನೇಚರ್ ಕನ್ನಡಕವನ್ನು ಧರಿಸಿ, ನಟ ಎಂದಿನಂತೆ ಡ್ಯಾಪ್ಪರ್ ಆಗಿ ಕಾಣಿಸಿಕೊಂಡಿದ್ದಾರೆ.

https://twitter.com/MumbaiCricAssoc/status/1636641244141977601

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read