ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ ‘ಜೈಲರ್’: ರಜನಿಕಾಂತ್ ಗೆ BMW X7 ಕಾರ್, 100 ಕೋಟಿ ರೂ. ನೀಡಿದ ಸನ್ ಪಿಕ್ಚರ್ಸ್

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಬಾಕ್ಸ್ ಆಫೀಸ್ ಲೂಟಿ ಮಾಡಿದ್ದು, ವಿಶ್ವದಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

‘ಜೈಲರ್’ ಯಶಸ್ಸನ್ನು ಆಚರಿಸಲು ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿತಿ ಮಾರನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ BMW ಕಾರನ್ನು ಉಡುಗೊರೆಯಾಗಿ ನೀಡಿದರು. ಜತೆಗೆ ಲಾಭದ ಪಾಲನ್ನು ಸಹ ನೀಡಿದ್ದಾರೆ. ರಜನಿಕಾಂತ್ ಅವರಿಗೆ 100 ಕೋಟಿ ರೂ. ಗಿಫ್ಟ್ ಚೆಕ್ ನೀಡಲಾಗಿದೆ ಎನ್ನಲಾಗಿದೆ.

ಸನ್ ಪಿಕ್ಚರ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಮುಖ್ಯಸ್ಥ ಕಲಾನಿಧಿ ಮಾರನ್ ಅವರು ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸೂಪರ್‌ಸ್ಟಾರ್ ಆಯ್ಕೆ ಮಾಡಿದ ಹೊಚ್ಚ ಹೊಸ BMW X7 ನ ಕೀಲಿ ಹಸ್ತಾಂತರಿಸಿದ್ದಾರೆ.

ಚೆನ್ನೈನ ಪೋಯಸ್ ಗಾರ್ಡನ್ ಮನೆಯಲ್ಲಿ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಮಾರನ್ ಬಹಿರಂಗಪಡಿಸದ ಮೊತ್ತದ ಚೆಕ್ ಅನ್ನು ರಜನಿಕಾಂತ್ ಅವರಿಗೆ ಹಸ್ತಾಂತರಿಸಿದರು. ರಜನಿಕಾಂತ್‌ ಗೆ ಉಡುಗೊರೆಯಾಗಿ ನೀಡಲಾದ ಹೊಸ X7 ಬೆಲೆ 1.22 ಕೋಟಿ ರೂ.ಗಳಿಂದ 1.25 ಕೋಟಿ ರೂ. ಇದರೊಂದಿಗೆ 100 ಕೋಟಿ ರೂ. ಚೆಕ್ ನೀಡಲಾಗಿದೆ ಎಂದು ಹೇಳಲಾಗಿದೆ.

ನೆಲ್ಸನ್ ನಿರ್ದೇಶಿಸಿದ ‘ಜೈಲರ್’ ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್ ಮೇಲೆ ಕೇಂದ್ರೀಕರಿಸುತ್ತದೆ. ಚಿತ್ರದಲ್ಲಿ ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

https://twitter.com/sunpictures/status/1697495856726098054

https://twitter.com/sunpictures/status/1697249724993356222

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read