BREAKING : ‘BCCI’ ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ನೇಮಕ |Rajeev Shukla

ಭಾರತದ ಮಾಜಿ ವೇಗಿ ರೋಜರ್ ಬಿನ್ನಿ ಇನ್ನು ಮುಂದೆ ಬಿಸಿಸಿಐ ಅಧ್ಯಕ್ಷರಲ್ಲ. ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜೀವ್ ಶುಕ್ಲಾ ಮುಂದಿನ ಚುನಾವಣೆಯವರೆಗೆ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ರೋಜರ್ ಬಿನ್ನಿ ಇನ್ನು ಮುಂದೆ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಲ್ಲ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಸ್ತುತ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಮುಂದಿನ ಸುತ್ತಿನ ಚುನಾವಣೆಯವರೆಗೆ ಶುಕ್ಲಾ ಹಂಗಾಮಿ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.

ರೋಜರ್‌ ಬಿನ್ನಿ ಅವರು ಅಕ್ಟೋಬರ್ 2022 ರಲ್ಲಿ ಬಿಸಿಸಿಐನ 36 ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅದುವರೆಗೆ ಸೌರವ್‌ ಗಂಗೂಲಿ ಆ ಸ್ಥಾನದಲ್ಲಿದ್ದರು. ಬಿನ್ನಿ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಭಾರತ ಪುರುಷರ ತಂಡ 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read