ಮತ್ತೊಂದು ಮರ್ಯಾದೆಗೇಡು ಹತ್ಯೆ: ಪ್ರೀತಿಸಿ ಮದುವೆಯಾದ ಪುತ್ರಿಯ ಜೀವ ತೆಗೆದು ಬೆಂಕಿ

ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಮರ್ಯಾದಾಗೇಡು ಹತ್ಯೆ ನಡೆದಿದೆ. 20 ವರ್ಷದ ಮಹಿಳೆಯನ್ನು ಆಕೆಯ ತಂದೆ ಮತ್ತು ಸಹೋದರ ಅಪಹರಿಸಿ ಕೊಂದಿದ್ದಾರೆ. ಸುಟ್ಟ ಮೃತದೇಹವನ್ನು ಚಿತಾಗಾರದಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಪತಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಸೌರಿತ್ ಗ್ರಾಮವನ್ನು ತಲುಪುವ ವೇಳೆಗೆ ದೇಹದ ಸುಮಾರು 80 ಪ್ರತಿಶತ ಸುಟ್ಟುಹೋಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೇರೆ ಜಾತಿಗೆ ಸೇರಿದ ವ್ಯಕ್ತಿಯನ್ನು ಮದುವೆಯಾಗಲು ಮಹಿಳೆಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಶಿಮ್ಲಾ ಕುಶ್ವಾಹ್ ಎಂಬ ಮಹಿಳೆಯ ಪೋಷಕರು ಬೇರೆ ಜಾತಿಗೆ ಸೇರಿದ ರವೀಂದ್ರ ಭೀಲ್ ಅವರನ್ನು ಮದುವೆಯಾಗಲು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಮರ್ಯಾದಾ ಹತ್ಯೆಯಾಗಿದೆ ಎಂದು ಹರ್ನವಾಡ ಶಾಹಾಜಿ ಡಿಎಸ್ಪಿ ಜೈ ಪ್ರಕಾಶ್ ಅಟಲ್ ಹೇಳಿದ್ದಾರೆ.

ಒಂದು ವರ್ಷದ ಹಿಂದೆ ಕುಶ್ವಾಹ್ ಮತ್ತು ಭೀಲ್ ಓಡಿಹೋಗಿ ಯುಪಿಯ ಗಾಜಿಯಾಬಾದ್‌ನಲ್ಲಿ ಮದುವೆಯಾಗಿದ್ದರು. ಜಲಾವರ್‌ನ ಸೌರ್ತಿ ಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಗಳು ಗುರುವಾರ ಬ್ಯಾಂಕ್‌ನಿಂದ ಹಣವನ್ನು ಹಿಂಪಡೆಯಲು ನೆರೆಯ ಬರಾನ್ ಜಿಲ್ಲೆಯ ಹರ್ನವದ್‌ ಶಾಹಾಜಿಗೆ ಬಂದಿದ್ದಾರೆ.

ಕುಶ್ವಾಹ್ ಅವರ ತಂದೆ, ಸಹೋದರ ಮತ್ತು ಅವರ ಮೂವರು ಸಂಬಂಧಿಕರು ಅಲ್ಲಿಗೆ ಬಂದು ಅವಳನ್ನು ಅಪಹರಿಸಿದ್ದಾರೆ. ಕೂಡಲೇ ಭೀಲ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಘಟನೆಯ ಬಗ್ಗೆ ಜಲಾವರ್‌ನಲ್ಲಿರುವ ಜಾವರ್ ಪೊಲೀಸ್ ಠಾಣೆಗೆ ಮತ್ತಷ್ಟು ಎಚ್ಚರಿಕೆ ನೀಡಿದರು.

ನಂತರ ಜಾವರ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಕುಶ್ವಾಹ್ ಅವರ ಮೃತದೇಹವನ್ನು ಸ್ಮಶಾನ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.

ಮಹಿಳೆಯ ಪೋಷಕರು ಮತ್ತು ಸಹೋದರ ಸೇರಿದಂತೆ 10-12 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಜಾವರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಜರ್ನೈಲ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read