BREAKING NEWS: ಬಿಜೆಪಿ ಮುಖಂಡನ ಹತ್ಯೆ ಮಾಡಿದ್ದ ‘ಗ್ಯಾಂಗ್ ಸ್ಟರ್’ ಗುಂಡೇಟಿಗೆ ಬಲಿ…!

ರಾಜಸ್ಥಾನದ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಿದ್ದ ಭೂಗತ ಪಾತಕಿ, ವಿರೋಧಿ ಪಾಳೆಯದ ಗುಂಡೇಟಿಗೆ ಇಂದು ಬಲಿಯಾಗಿದ್ದಾನೆ. ಭರತ್ ಪುರ್ ನ್ಯಾಯಾಲಯಕ್ಕೆ ಈತನನ್ನು ಕರೆತರುವ ವೇಳೆಯೇ ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.

ಭೂಗತ ಪಾತಕಿ ಕುಲದೀಪ್ ಜಗೀನಾ ಹತ್ಯೆಯಾದವನಾಗಿದ್ದು, ಈತ ಕಳೆದ ವರ್ಷ ಸೆಪ್ಟೆಂಬರ್ 4ರಂದು ತನ್ನ ನಾಲ್ವರು ಸಹಚರರೊಂದಿಗೆ ಸೇರಿ ಬಿಜೆಪಿ ಮುಖಂಡ ಕೃಪಾಲ್ ಜಗೀನಾ ಅವರನ್ನು ಗುಂಡಿಟ್ಟು ಕೊಲೆ ಮಾಡಿದ್ದ.

ಈ ಪ್ರಕರಣ ಸಂಬಂಧ ಪೊಲೀಸರು ಕುಲದೀಪ್ ನನ್ನು ಬಂಧಿಸಿದ್ದು, ವಿಚಾರಣೆಗೆ ಹಾಜರಾಗುವ ಸಲುವಾಗಿ ಭರತ್ ಪುರ್ ನ್ಯಾಯಾಲಯಕ್ಕೆ ಆತನನ್ನು ಕರೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಶಸ್ತ್ರ ಸಜ್ಜಿತರಾಗಿ ಬಂದಿದ್ದ ಆರೋಪಿಗಳು ಅಮೋಲಿ ಟೋಲ್ ಪ್ಲಾಜಾ ಬಳಿ ಮೊದಲಿಗೆ ಪೊಲೀಸರ ಕಣ್ಣಿಗೆ ಕಾರದಪುಡಿ ಎರಚಿ, ಬಳಿಕ ಗುಂಡು ಹಾರಿಸಲು ಆರಂಭಿಸಿದ್ದಾರೆ. ಇದರ ಪರಿಣಾಮ ಕುಲದೀಪ್ ಸ್ಥಳದಲ್ಲಿಯೇ ಸಾವನಪ್ಪಿದ್ದು, ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿರುವ ಪೊಲೀಸರನ್ನು ಆರ್ ಬಿ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read