ಉದ್ಯೋಗ ಉಳಿಸಿಕೊಳ್ಳಲು ಕೊಲೆಗಾರರಾದ ಅಪ್ಪ-ಅಮ್ಮ…! ಐದು ತಿಂಗಳ ಹೆಣ್ಣು ಮಗುವನ್ನ ಕಾಲುವೆಗೆ ಎಸೆದ ಪಾಪಿಗಳು

ದುಡ್ಡಿಗಾಗಿ, ಚಿನ್ನಕ್ಕಾಗಿ, ಅಧಿಕಾರಕ್ಕಾಗಿ ಕೊಲೆ ಮಾಡಿದ ಪಾಪಿಗಳನ್ನ ನೋಡಿರ್ತಿರಾ. ಆದರೆ ಇಲ್ಲಿ ಸರ್ಕಾರಿ ಕೆಲಸ ಉಳಿಸಿಕೊಳೊದಕ್ಕೆ ದಂಪತಿಗಳು 5 ತಿಂಗಳ ಹೆತ್ತ ಕರುಳನ್ನೇ ಅಮಾನುಷವಾಗಿ ಕೊಂದು ಹಾಕಿದ್ದಾರೆ.

ರಾಜಸ್ಥಾನ್‌ನಲ್ಲಿ ಸರ್ಕಾರಿ ನೌಕರರು ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವಂತಿಲ್ಲ ಅನ್ನುವ ಕಾನೂನು ಜಾರಿಯಲ್ಲಿದೆ. ಈ ಕಾರಣಕ್ಕೆ ಸರ್ಕಾರಿ ನೌಕರಿ ಕಳೆದುಕೊಳ್ಳುವ ಭಯದಲ್ಲಿ ಗಂಡ-ಹೆಂಡತಿ ಸೇರಿ 5 ತಿಂಗಳ ಹೆತ್ತ ಕರುಳನ್ನೇ ನಾಲೆಗೆ ಎಸೆದು ಅದರ ಸಾವಿಗೆ ಕಾರಣ ಆಗಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಜನ್ವರ್‌ ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ಪ್ರಮಾಣ ಪತ್ರವನ್ನ ನೀಡಿದ್ದರು. ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನ ಹೊಂದಿರುವವರು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಸರ್ಕಾರಿ ನೌಕರರು ಇದ್ದಾರೆ. ಅವರಲ್ಲಿ ಚಂದಾಸರ್ ಗ್ರಾಮದಲ್ಲಿ ಗುತ್ತಿಗೆ ಶಾಲಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಜನ್ವರ್ ಕೂಡಾ ಒಬ್ಬರು. ಇವರಿಗೂ ತಾವು ಎಲ್ಲಿ ಕೆಲಸ ಕಳೆದುಕೊಳ್ಳುವೆವೋ ಅನ್ನೋ ಭಯ ಕಾಡಿದೆ. ಇದೇ ಕಾರಣಕ್ಕೆ ಅವರು 5 ತಿಂಗಳ ಮಗುವನ್ನ ನೀರು ತುಂಬಿದ್ದ ಕಾಲುವೆಗೆ ಬಿಸಾಕಿ ಸಾಯಿಸಿದ್ದಾರೆ.

ಮೃತ ಮಗುವಿನ ಶರೀರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗ ದಂಪತಿಗಳನ್ನು ಬಂಧಿಸಲಾಗಿದ್ದು, ಪುರುಷ ಮತ್ತು ಮಹಿಳೆ ಮೃತ ಹೆಣ್ಣುಮಗುವಿನ ಪೋಷಕರು ಎಂದು ಸರ್ಕಲ್‌ ಆಫೀಸರ್‌ ವಿನೋದ್ ಕುಮಾರ್‌ ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read