ದುಡುಕಿನ ನಿರ್ಧಾರ ಕೈಗೊಂಡ ಮತ್ತೊಬ್ಬ ವಿದ್ಯಾರ್ಥಿ: ಕೋಟಾದಲ್ಲಿ 12 ದಿನಗಳಲ್ಲಿ 3 ನೇ ಆತ್ಮಹತ್ಯೆ

ರಾಜಸ್ಥಾನದ ಕೋಟಾದಲ್ಲಿ ಉತ್ತರ ಪ್ರದೇಶದ ಬಿಟೆಕ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 12 ದಿನಗಳಲ್ಲಿ ಕೋಟಾದಲ್ಲಿ ನಡೆದ ಮೂರನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಇದಾಗಿದೆ. ವಿಜ್ಞಾನನಗರ ಪೊಲೀಸ್ ಠಾಣೆಯ ಪಿಜಿಯಲ್ಲಿ ವಾಸವಾಗಿರುವ 27 ವರ್ಷದ ನೂರ್ ಮೊಹಮ್ಮದ್ ಮೃತರು.

ನೂರ್ ತನ್ನ ಪಿಜಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗದ ಕಾರಣ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ನೂರ್ ಮೊಹಮ್ಮದ್ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ವೀರಪುರದವರು ಎಂದು ವಿಜ್ಞಾನ ನಗರ ಪೊಲೀಸ್ ಠಾಣೆ ಎಸ್‌ಹೆಚ್‌ಒ ಕೌಶಲ್ಯ ತಿಳಿಸಿದ್ದಾರೆ. ಪಿಜಿ ನಿರ್ವಾಹಕರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ನೂರ್ ಬಿಟೆಕ್‌ಗೆ ಆಯ್ಕೆಯಾಗಿ ಚೆನ್ನೈನ ಕಾಲೇಜಿಗೆ ಪ್ರವೇಶ ಪಡೆದಿದ್ದರಿಂದ ಪ್ರಸ್ತುತ ಯಾವುದೇ ಕೋಚಿಂಗ್ ಸೆಂಟರ್‌ಗೆ ದಾಖಲಾಗಿಲ್ಲ. ಕೋಟಾದಲ್ಲಿ ಉಳಿದುಕೊಂಡು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.

2024 ರಲ್ಲಿ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಜನವರಿ 29 ರಂದು ಸ್ಥಳೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ನೀಟ್‌ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಜನವರಿ 23 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read