ಕೇಂದ್ರ ಚುನಾವಣಾ ಆಯೋಗ ರಾಜಸ್ಥಾನ ವಿಧಾನಸಭಾ ಚುನಾವಣೆ ದಿನಾಂಕ ಬದಲಾವಣೆ ಮಾಡಿದ್ದು, ನವೆಂಬರ್ 23 ರ ಬದಲು ನವೆಂಬರ್ 25 ರಂದು ಮತದಾನ ನಿಗದಿ ಮಾಡಿದೆ.
ರಾಜಸ್ಥಾನದ ಪಾಲಿಯ ಬಿಜೆಪಿ ಸಂಸದ ಪಿಪಿ ಚೌಧರಿ ಬುಧವಾರ (ಅಕ್ಟೋಬರ್ 11) ಚುನಾವಣಾ ಆಯೋಗಕ್ಕೆ ಪತ್ರ ಬರೆದು ರಾಜಸ್ಥಾನ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಮರು ನಿಗದಿಪಡಿಸುವಂತೆ ಕೋರಿದ್ದರು. ಮತದಾನದ ದಿನದಂದು ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು.
“ಮತದಾನದ ಶೇಕಡಾವಾರು ಹೆಚ್ಚಿಸುವುದು ಚುನಾವಣಾ ಆಯೋಗ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮಾನ್ಯ ಜನರು ಪ್ರಜಾಪ್ರಭುತ್ವದ ಪವಿತ್ರ ಹಬ್ಬದಲ್ಲಿ ಭಾಗವಹಿಸುವ ಮೂಲಕ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಅಲ್ಲದೆ, ರಾಜಸ್ಥಾನದಲ್ಲಿ ದೊಡ್ಡ ಹಬ್ಬದ ದಿನದಂದು ಮತದಾನ ನಡೆಸುವುದು ಮತದಾನ ಜಾಗೃತಿಯ ಬಗ್ಗೆ ಚುನಾವಣಾ ಆಯೋಗದ ನಿರ್ಣಯಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದರು.
ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿತ್ತು.
ಛತ್ತೀಸ್ ಗಢ ರಾಜ್ಯದಲ್ಲಿ ನವೆಂಬರ್ 7 ಮತ್ತು 17 ರಂದು ಮತದಾನ
ಮಧ್ಯಪ್ರದೇಶದ 230 ಕ್ಷೇತ್ರಗಳಿಗೆ ನವೆಂಬರ್ 17 ರಂದು ಮತದಾನ
ರಾಜಸ್ಥಾನದಲ್ಲಿ ನವೆಂಬರ್ 25 ರಂದು ಮತದಾನ
ನವೆಂಬರ್ 7 ರಂದು ಮಿಜೋರಾಂ ವಿಧಾನಸಭೆಗೆ ಮತದಾನ.
ತೆಲಂಗಾಣದ 119 ಕ್ಷೇತ್ರಗಳಿಗೆ ನವೆಂಬರ್ 30 ರಂದು ಮತದಾನ ನಡೆಯಲಿದೆ.
https://twitter.com/ANI_MP_CG_RJ/status/1712006225175736490?ref_src=twsrc%5Etfw%7Ctwcamp%5Etweetembed%7Ctwterm%5E1712006225175736490%7Ctwgr%5Ed5a51488da39dc79e09926bdba5168ae6ae86b7c%7Ctwcon%5Es1_&ref_url=https%3A%2F%2Fwww.jagran.com%2Felections%2Frajasthan-rajasthan-election-2023-bjp-mp-pp-chaudhary-demands-election-commission-to-change-date-rajasthan-elections-23553358.html