ರಾಜಸ್ಥಾನದಲ್ಲಿ ಘೋರ ದುರಂತ: ಟೆಂಪೋಗೆ ಬಸ್ ಡಿಕ್ಕಿ: 8 ಮಕ್ಕಳು ಸೇರಿ 12 ಜನ ಸಾವು

ಧೋಲ್‌ ಪುರ: ಪ್ರಯಾಣಿಕರ ಬಸ್ ಮತ್ತು ಟೆಂಪೋ ಡಿಕ್ಕಿಯಾದ ಪರಿಣಾಮ ಕನಿಷ್ಠ 12 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಧೋಲ್‌ಪುರ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 11-ಬಿಯಲ್ಲಿ ಸುನಿಪುರ್ ಬಳಿ ಅಪಘಾತ ಸಂಭವಿಸಿದೆ. ಬಲಿಯಾದವರಲ್ಲಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಕ್ಕಳು ಸೇರಿದ್ದಾರೆ.

ಬಸ್‌ನಲ್ಲಿ ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಪ್ರಯಾಣಿಕರು ಇದ್ದರು. ಮೃತರಲ್ಲಿ ಐವರು ಗಂಡು ಮಕ್ಕಳು, ಮೂವರು ಹುಡುಗಿಯರು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read