ಪುನೀತ್ ಅಭಿನಯದ ‘ಜೇಮ್ಸ್’ ಬಳಿಕ ‘ಸೋನಿಲಿವ್’ ನಲ್ಲಿ ಮತ್ತೊಂದು ಕನ್ನಡ ಸಿನಿಮಾ ರಿಲೀಸ್ !

ಒಟಿಟಿಯಲ್ಲಿ ಬರಲಿದೆ ರಾಜ್​ ಬಿ. ಶೆಟ್ಟಿ ನಟನೆಯ 'ಟೋಬಿ' ಸಿನಿಮಾ; ಇಲ್ಲಿದೆ ಪೂರ್ತಿ ಮಾಹಿತಿ.. - Raj b shetty starrer toby movie ott release on sony liv on 22nd december mdn Kannada News

ಇತ್ತೀಚಿನ ದಿನಗಳಲ್ಲಿ ದೊಡ್ಡ ಪರದೆ ಬಳಿಕ ಒಟಿಟಿ ಫ್ಲಾಟ್ ಫಾರಂ ಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಮೊದಲಾದ ಒಟಿಟಿ ವೇದಿಕೆಗಳಲ್ಲಿ ಹಲವು ಚಿತ್ರಗಳು ಈಗಾಗಲೇ ಲಭ್ಯವಿದೆ.

ಹಾಗೆಯೇ ಮತ್ತೊಂದು ಒಟಿಟಿ ವೇದಿಕೆ ಸೋನಿಲಿವ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಈ ಮೊದಲು ಬಿಡುಗಡೆಯಾಗಿತ್ತು. ಇದೀಗ ರಾಜ್ ಬಿ ಶೆಟ್ಟಿ, ಚೈತ್ರ ಜೆ. ಆಚಾರ್ ಹಾಗೂ ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಟೋಬಿ’ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದ್ದು, ಈ ಒಟಿಟಿ ಯಲ್ಲಿ ಲಭ್ಯವಾಗುವ ಎರಡನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ.

ಬಾಸಿಲ್ ಆಕ್ಷನ್ – ಕಟ್ ಹೇಳಿರುವ ‘ಟೋಬಿ’ ಸಿನಿಮಾದ ಮೂಲಕತೆಯನ್ನು ಟಿ.ಕೆ. ದಯಾನಂದ್ ಬರೆದಿದ್ದಾರೆ. ರಾಜ್ ಬಿ ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ನಿರ್ಮಾಣ ಮಾಡಿದ್ದ ರವಿ ರೈ ಕಳಸ ‘ಟೋಬಿ’ ಯನ್ನು ನಿರ್ಮಾಣ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read