BIG NEWS: ಹೆದ್ದಾರಿಯಲ್ಲಿ 500 ರೂ.ಗಳ ನೋಟಿನ ಮಳೆ…! ಆಯ್ದುಕೊಳ್ಳಲು ಮುಗಿಬಿದ್ದ ಜನ, ಸಂಚಾರ ಅಸ್ತವ್ಯಸ್ತ | WATCH VIDEO

ಕೌಶಂಬಿ ಹೆದ್ದಾರಿಯಲ್ಲಿ 500 ರೂ. ನೋಟುಗಳ ಮಳೆಯಾಗಿದ್ದು, ಸ್ಥಳೀಯರು ವಾಹನ ದಟ್ಟಣೆಯ ನಡುವೆ ಅಲ್ಲಲ್ಲಿ ನಗದು ಪಡೆಯಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಅವ್ಯವಸ್ಥೆ ಉಂಟಾಗಿದೆ:

ಮೇ 15 ರಂದು ಕೌಶಂಬಿ ಹೆದ್ದಾರಿಯಲ್ಲಿ ಭಾರಿ ಮೊತ್ತದ 500 ರೂ. ನೋಟುಗಳು ಗಾಳಿಯಲ್ಲಿ ಹಾರಾಡಿ ಬಿದ್ದಿವೆ. ಇದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳಿಗೆ ಅದು ಹಣದ ಮಳೆಯಂತೆ ಕಾಣುತ್ತಿತ್ತು. ಅನೇಕರು ಹಣ ಪಡೆಯಲು ಮುಗಿಬಿದ್ದಿದ್ದಾರೆ. ತಡೆಗೋಡೆಗಳನ್ನು ದಾಟಿ ಸಾಧ್ಯವಾದಷ್ಟು ಹಣವನ್ನು ಆಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ. ಅವರಲ್ಲಿ ಕೆಲವರು ಕಾರ್ ಗಳು ಚಲಿಸುವಾಗಲೇ ಅಪಾಯಕಾರಿಯಾಗಿ ರಸ್ತೆಗಳನ್ನು ದಾಟಿದ್ದಾರೆ.

ಭವೇಶ್ ಎಂಬ ಉದ್ಯಮಿ ಐಷಾರಾಮಿ ಬಸ್‌ನಲ್ಲಿ ವಾರಣಾಸಿ ಮತ್ತು ದೆಹಲಿ ನಡುವೆ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ಅಧಿಕಾರಿಗಳು ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಭವೇಶ್ ರಸ್ತೆಬದಿಯ ಧಾಬಾದಲ್ಲಿ ಊಟ ಮಾಡಲು ಬಸ್ ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ. ಶಂಕಿತರು ಭವೇಶ್ ಅವರ ಬ್ಯಾಗ್ ಅನ್ನು ತೆಗೆದುಕೊಂಡು ಓಡಿಹೋದರು, ಅದರಲ್ಲಿ 8-10 ಲಕ್ಷ ರೂ.ಗಳಿದ್ದವು. ಅವರು ತಪ್ಪಿಸಿಕೊಳ್ಳುವಾಗ, ಒಂದಿಷ್ಟು ಹಣ ರಸ್ತೆಯ ಮೇಲೆ ಬಿದ್ದಿವೆ.

ಒಂದೂವರೆ ಲಕ್ಷಕ್ಕೂ ಹೆಚ್ಚು ರೂಪಾಯಿಗಳು ಹೆದ್ದಾರಿಯಾದ್ಯಂತ ಹರಡಿಕೊಂಡಿರುವುದು ಕಂಡುಬಂದಿದೆ ಎಂದು ಕೊಖ್ರಾಜ್ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಘಟನೆಯ ದೃಶ್ಯಾವಳಿಗಳಲ್ಲಿ ಅನೇಕ ಜನರು ರಸ್ತೆಯಲ್ಲಿ ಬಿದ್ದ ಹಣವನ್ನು ತೆಗೆದುಕೊಳ್ಳಲು ಓಡುತ್ತಿರುವುದು ಕಂಡುಬಂದಿದೆ.

ಸ್ವಲ್ಪ ಸಮಯದ ನಂತರ ಪೊಲೀಸರು ಬಂದು ಉದ್ಯಮಿ ಭವೇಶ್ ಬಳಿ ಹಣದ ಬಗ್ಗೆ ವಿಚಾರಿಸಿದ್ದಾರೆ. ಹಣವನ್ನು ದೋಚಲಾಗಿದೆಯೇ ಅಥವಾ ತಪ್ಪಾಗಿ ಬಿದ್ದಿದೆಯೇ ಎಂದು ಅಧಿಕಾರಿಗಳಿಗೆ ಇನ್ನೂ ತಿಳಿದಿಲ್ಲ. ತನಿಖೆಗೆ ಕೈಗೊಂಡಿದ್ದು, ಪೊಲೀಸರು ಧಾಬಾದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read