ರಾಯಚೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ವ್ಯಕ್ತಿಯೋರ್ವನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.
ಭಾರತ-ಪಾಕಿಸ್ತನದ ನಡುವೆ ಉದ್ವಿಗ್ನ ಸ್ಥಿತಿ, ಕದನ ವಿರಾಮ ಘೋಷಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರಫೆಲ್ ರುದ್ಧ ವಿಮಾನದ ಬಗ್ಗೆ ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಅವಹೇಳನಕಾರಿ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದ.
ಇದೀಗ ಆರೋಪಿಯನ್ನು ತುರ್ವಿಹಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಜ್ಮೀರ್ (37) ಎಂದು ಗುರುತಿಸಲಾಗಿದೆ. ಚಕ್ಕಡಿ ಮೇಲೆ ಅಳುತ್ತಾ ಕುಳಿತಿರುವ ಪ್ರಧಾನಿ ಮೋದಿ ಚಿತ್ರ ಹಾಗೂ ಅದರ ಮೇಲೆ ರಫೇಲ್ ಯುದ್ಧ ವಿಮಾನವನ್ನು ಸಾಗಿಸುತ್ತಿದ್ದ ಫೋಟೋವನ್ನು ಪೋಸ್ಟ್ ಮಾಡಿದ್ದ. ತುರ್ವಿಹಾಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.