ರಾಯಚೂರು: ಮನೆ ಮೇಲ್ಛಾವಣಿ ಕುಸಿದು ಬಿದ್ದು ಟೀ ಕುಡಿಯುತ್ತಿದ್ದ ವೃದ್ಧೆ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ನಗರದ ಗಂಜ್ ಸರ್ಕಲ್ ಬಳಿ ಈ ದುರಂತ ಸಂಭವಿಸಿದೆ. 60 ವರ್ಷದ ವೃದ್ಧೆ ಮೃತ ದುರ್ದೈವಿ. ಟೀ ಕುಡಿಯಲೆಂದು ವೃದ್ಧೆ ಅಂಗಡಿಗೆ ಬಂದಿದ್ದರು. ಅಂಗಡಿ ಬಳಿ ನಿಂತು ಟೀ ಕುಡಿಯುತ್ತಿದ್ದ ವೇಳೆ ಅಂಗಡಿಯ ಪಕ್ಕದಲ್ಲಿರುವ ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಿದ್ದಿದೆ.
ಅವಶೇಷಗಳ ಅಡಿ ಸಿಲುಕಿದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.