ರಾಯಚೂರು: ರಾಯಚೂರಿನಲ್ಲಿ ಹಕ್ಕಿಗಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯದ ವರದಿ ಜಿಲ್ಲಾಡಳಿತ, ಪಶುಸಂಗೋಪನಾ ಇಲಾಖೆ ಕೈ ಸೇರಿಸೆ.
ರಾಯಚೂರಿನಲ್ಲಿ ಪಕ್ಷಿಗಳ ಸಾವಿಗೆ ಹಕ್ಕಿಜ್ವರ ಕಾರಣವಲ್ಲ ಎಂಬುದು ವರದಿಯಲ್ಲಿ ದೃಢಪಟ್ಟಿದೆ. ರಾಯಚೂರಿನ ಮಾನ್ವಿ, ರಬಣಕಲ್ ಸೇರಿದಂತೆ ಹಲವೆಡೆ ಬೆಳ್ಳಕ್ಕಿ, ಪಾರಿವಾಳ, ಕಾಗೆ, ಕೊಕ್ಕರೆ, ಕಿಂಗ ಫಿಶರ್ ಸೇರಿದಂತೆ 30ಕ್ಕೂ ಹೆಚ್ಚು ಹಕ್ಕಿಗಳು ಇದ್ದಕ್ಕಿದಂತೆ ಸಾವನ್ನಪ್ಪಿದ್ದವು. ಪಕ್ಷಿಗಳ ಸಾವಿಗೆ ಹಕ್ಕಿಜ್ವರ ಕಾರಣವಲ್ಲ. ಆತಂಕಪಡುವ ಗತ್ಯವಿಲ್ಲ ಎಂದು ವರದಿ ತಿಳಿಸಿದೆ.
ಪಕ್ಷಿಗಳ ಸಾವಿಗೆ ಹಕ್ಕಿಜ್ವರ ಇರಬಹುದು ಎಂಬ ಆತಂಕದಲ್ಲಿ ರಾಯಚೂರಿನಲ್ಲಿ ಕೋಳಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆಂಢ್ರ, ತೆಅಲಂಗಾಣ ರಾಜ್ಯಗಳಲ್ಲಿ ಹಕ್ಕಿಜ್ವರ ಹೆಚ್ಚುತ್ತಿರುವುದರಿಂದ ಹಾಗೂ ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿಯೂ ಹಕ್ಕಿಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲರ್ಟ್ ಘೋಷಿಸಲಾಗಿತ್ತು.