ಸಂದರ್ಶನದ ಸಮಯದಲ್ಲಿ ನಾಲ್ಕು ಕಪ್​ ಐಸ್ ​ಕ್ರೀಂ ತಿಂದು ಮುಗಿಸಿದ ರಾಹುಲ್​- ವಿಡಿಯೋ ವೈರಲ್

ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ದೇಶದ ದಕ್ಷಿಣದ ತುದಿಯಿಂದ ಪ್ರಾರಂಭವಾದ ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ಸಿಗರು ಸುಮಾರು 3,500 ಕಿಲೋಮೀಟರ್‌ಗಳಷ್ಟು ನಡೆದಿದ್ದಾರೆ. ಅವರ ಪ್ರಯಾಣದ ಸಮಯದಲ್ಲಿ, ಅವರು ಹಲವಾರು ಜನಪ್ರಿಯ ಯೂಟ್ಯೂಬ್ ಚಾನೆಲ್‌ಗಳೊಂದಿಗೆ ಸಂವಹನ ನಡೆಸಿದ್ದಾರೆ.

ರಾಜಸ್ಥಾನದಲ್ಲಿ ಅಂತಹ ಒಂದು ಸಂವಾದದ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಕರ್ಲಿ ಟೇಲ್ಸ್‌ನ ಕಾಮಿಯಾ ಜಾನಿ ಅವರೊಂದಿಗೆ ಮಾತನಾಡುವಾಗ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದು ಇಣುಕು ನೋಟ ನೀಡಿದ್ದಾರೆ. ರಾಹುಲ್ ಅವರ ಆಹಾರದ ಆದ್ಯತೆಗಳು, ಶಿಕ್ಷಣ, ಮದುವೆ ಯೋಜನೆಗಳು ಮತ್ತು ಮುಖ್ಯವಾಗಿ ಐಸ್ ಕ್ರೀಮ್‌ಗಳ ಮೇಲಿನ ಪ್ರೀತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಿದರು.

ಈಗ, ಚಾನೆಲ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ರಾಹುಲ್​ ಗಾಂಧಿ ಐಸ್‌ಕ್ರೀಮ್ ತಿನ್ನುತ್ತಿರುವುದನ್ನು ತೋರಿಸುವ ರೀಲ್ ಪೋಸ್ಟ್ ಮಾಡಿದೆ. ಸಂದರ್ಶಕರು ಫೋನ್ ಕರೆ ಮಾಡಲು ಸ್ವಲ್ಪ ದೂರ ಹೋಗಿ ಬರುವಷ್ಟರಲ್ಲಿ ರಾಹುಲ್​ ಗಾಂಧಿ 4 ಕಪ್ ಐಸ್ ಕ್ರೀಂ ಮುಗಿಸಿ ಅಲ್ಲಿಂದ ಟಾಟಾ ಹೇಳಿ ಹೋಗುವ ವಿಡಿಯೋ ಇದಾಗಿದೆ.

ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು 3,970 ಕಿಮೀ, 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30 ರಂದು ಮುಕ್ತಾಯಗೊಳ್ಳಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

https://www.youtube.com/watch?v=NWuGYksZiSs&feature=youtu.be

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read