ದಲಿತರ ಮನೆಯಲ್ಲಿ ಅಡುಗೆ ಮಾಡಿ ಊಟ ಸವಿದ ರಾಹುಲ್ ಗಾಂಧಿ : ವಿಡಿಯೋ ಹಂಚಿಕೊಂಡ CM ಸಿದ್ದರಾಮಯ್ಯ |Video

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಲಿತರ ಮನೆಯಲ್ಲಿ ಅಡುಗೆ ಮಾಡಿ ಊಟವನ್ನು ಸವಿದಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು..?

ದಲಿತರ ಊಟದೆಡೆಗೆ ಅವಜ್ಞೆಯಷ್ಟೇ ಅಲ್ಲ, ತೀವ್ರ ಅಸಹನೆಯನ್ನೂ ಬೆಳೆಸಿಕೊಂಡಿರುವ ಸಮಾಜ ನಮ್ಮದು. ದಲಿತರ ಕೈಯಿಂದ ತಯಾರಿಸಿದ ಅಡುಗೆಯ ಸೇವನೆ ಇರಲಿ, ಅವರು ಊಟಕ್ಕೆ ಬಳಸುವ ಪಾತ್ರೆ ಮುಟ್ಟಿದರೂ ಅದನ್ನು ಮೈಲಿಗೆ ಎಂದು ಕರೆಯುವ ಮನಸ್ಥಿತಿ ಇಂದಿಗೂ ನಮ್ಮಲ್ಲಿ ವ್ಯಾಪಕವಾಗಿದೆ. ಶಾಲೆಗಳಲ್ಲಿ ದಲಿತ ಸಮುದಾಯದವರು ಅಡುಗೆ ಮಾಡಿದರೆ ಅದನ್ನು ವಿರೋಧಿಸುವುದು, ಜಾತ್ರೆ, ದೇವಸ್ಥಾನಗಳ ಅಡುಗೆಯ ಉಸ್ತುವಾರಿಯಿಂದ ದಲಿತರನ್ನು ಪ್ರಜ್ಞಾಪೂರ್ವಕವಾಗಿ ಕೈ ಬಿಡುವುದು ಅಥವಾ ದೂರವಿರಿಸುವುದು ಇವೆಲ್ಲವನ್ನು ನಮ್ಮ ಸಮಾಜದಿಂದ ಇಂದಿಗೂ ತೊಡೆಯಲಾಗಿಲ್ಲ.

ಆಹಾರವೆನ್ನುವುದು ಅವರವರ ರುಚಿ, ಇಚ್ಛೆಗೆ ಅನುಸಾರವಾಗಿಯೇ ಇರುವುದಾದರೂ, ತಳ ಸಮುದಾಯಗಳ ಆಹಾರ ಸಂಸ್ಕೃತಿಯನ್ನು ಕೀಳಾಗಿ ಕಾಣುವ ಕೊಳಕು ಮನಸ್ಥಿತಿಯನ್ನು ಬೇರು ಸಹಿತ ಕಿತ್ತು ಹಾಕದೆ ದೇಶದಲ್ಲಿ ನೈಜ ಸಾಂಸ್ಕೃತಿಕ ಸಮ್ಮಿಳನ ಸಾಧ್ಯವಾಗದು. ಮಹಾರಾಷ್ಟ್ರದ ಮರಾಠವಾಡದ ದಲಿತ ಆಹಾರ ಸಂಸ್ಕೃತಿಯನ್ನು ಕಟ್ಟಿಕೊಟ್ಟಿರುವ ಲೇಖಕ ಶಾಹೂ ಪಟೋಲೆ ಅವರೊಂದಿಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಡುಗೆ ತಯ್ಯಾರಿಯಲ್ಲಿ ಭಾಗಿಯಾಗಿ, ಊಟದೊಟ್ಟಿಗೆ ನಡೆಸಿದ ಆಹಾರ ಸಂಸ್ಕೃತಿಯ ಚರ್ಚೆ ಅವರು ತಯಾರಿಸಿದ ಆಹಾರಾದಷ್ಟೇ ಚೇತೋಹಾರಿಯಾಗಿದೆ. ಇಂದು ನಮಗೆ ಸಾಮಾಜಿಕವಾಗಿ ಬೇಕಾಗಿರುವುದು ‘ಚಾಯ್ ಪೇ ಚರ್ಚಾ’ದಂತಹ ಬೀಡಾಡಿ ಚರ್ಚೆಗಳಲ್ಲ, ನಮ್ಮೆಲ್ಲರನ್ನು ಬೆಸೆಯುವಂತಹ, ಚಿಂತನೆಗೆ ಹಚ್ಚುವಂತಹ ಆಹಾರ ಸಂಸ್ಕೃತಿಯಂತಹ ಮೌಲಿಕ ಚರ್ಚೆಗಳು. ರಾಹುಲ್ ಗಾಂಧಿಯವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ತುಣುಕನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುವ ಖುಷಿ ನನ್ನದು. ಎಂದು ಬರೆದುಕೊಂಡಿದ್ದಾರೆ.

https://twitter.com/siddaramaiah/status/1843313514745639118

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read