ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿದೆ. ಈ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ ಕೋಚ್ ಸೇವಾ ಅವಧಿ ಮುಕ್ತಾಯವಾಗಿದೆ.
ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಟೀಮ್ ಇಂಡಿಯಾ ಹಿಂದಿನ ಮೂರು ಐಸಿಸಿ ನಾಕ್ ಔಟ್ ಪಂದ್ಯಗಳಲ್ಲಿ ಹಿನ್ನಡೆ ಕಂಡಿತ್ತು. ಆದರೆ, 2024ರ ಟಿ 20 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿಯ ಬರ ನೀಗಿಸಿದೆ.
ಭಾರತ ತಂಡದ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಸಾಧನೆ ಮಾಡಿದ್ದಾರೆ. ಅವರ ಸೇವಾ ಅವಧಿಯಲ್ಲಿ 24 ಟೆಸ್ಟ್ ಗಳಲ್ಲಿ 14 ಪಂದ್ಯ ಗೆದ್ದಿದ್ದು, ಮೂರು ಪಂದ್ಯಗಳು ಡ್ರಾ ಆಗಿವೆ. 53 ಏಕದಿನ ಪಂದ್ಯಗಳಲ್ಲಿ 36 ಪಂದ್ಯ ಜಯಿಸಿದ್ದು, 70 ಟಿ20 ಪಂದ್ಯಗಳಲ್ಲಿ 51 ಪಂದ್ಯಗಳಲ್ಲಿ ಭಾರತ ತಂಡ ಜಯಗಳಿಸಿದೆ.
ಟೀಮ್ ಇಂಡಿಯಾ ಟಿ20 ಚಾಂಪಿಯನ್ ಆಗುತ್ತಿದ್ದಂತೆ ತಂಡದ ಆಟಗಾರರು ರಾಹುಲ್ ದ್ರಾವಿಡ್ ಅವರನ್ನು ಹೊತ್ತು ಸಂಭ್ರಮಿಸಿದ್ದಾರೆ. ವಿರಾಟ್ ಕೊಹ್ಲಿ T20WC ಟ್ರೋಫಿಯನ್ನು ಹಸ್ತಾಂತರಿಸಿದ ನಂತರ ಭಾರತದ ಕೋಚ್ ರಾಹುಲ್ ದ್ರಾವಿಡ್ ಭಾವುಕರಾಗಿದ್ದಾರೆ.
https://twitter.com/CaughtAtGully/status/1807133651882119654
https://twitter.com/buddhimedia/status/1807126658391941276