ರಾಹುಲ್ ಗಾಂಧಿ-ಅಖಿಲೇಶ್ ಯಾದವ್ ಭಾಗವಹಿಸಿದ್ದ ಸಮಾವೇಶದಲ್ಲಿ ನೂಕುನುಗ್ಗಲು

ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಾನುವಾರ ಭಾಗವಹಿಸಿದ್ದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ನೂಕುನುಗ್ಗಲು, ಕಾಲ್ತುಳಿತದಂತಹ ಉಂಟಾಗಿದೆ.

ಉತ್ತರ ಪ್ರದೇಶದ ಫುಲ್ಪುರದಲ್ಲಿ ಐದನೇ ಹಂತದ ಮತದಾನಕ್ಕೆ ಮುನ್ನ ಚುನಾವಣಾ ಪ್ರಚಾರಕ್ಕಾಗಿ ಹೊರಟಿದ್ದ ನಾಯಕರು ಸಾವಿರಾರು ಜನ ಗುಂಪು ವೇದಿಕೆಯತ್ತ ದೌಡಾಯಿಸಿದ್ದರಿಂದ ಸ್ಥಳದಿಂದ ತೆರಳಿದ್ದಾರೆ.

ಪೊಲೀಸರು, ಅಧಿಕಾರಿಗಳು ಪದೇ ಪದೇ ಮನವಿ ಮಾಡಿದರೂ ಕೇಳದ ಬೆಂಬಲಿಗರು ಮತ್ತು ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ವೇದಿಕೆಯತ್ತ ನುಗ್ಗಿದ್ದಾರೆ. ಜನಸಮೂಹವು ಸಮಾವೇಶದ ಸ್ಥಳದಲ್ಲಿ ಓಡುವುದನ್ನು ಮತ್ತು ನಾಯಕರನ್ನು ಸಮೀಪದಿಂದ ನೋಡಲು ಬ್ಯಾರಿಕೇಡ್‌ಗಳನ್ನು ಒಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಯ ಸಮಯದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಫುಲ್ಪುರದಿಂದ ಹೊರಟ ನಂತರ ನಾಯಕರು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಎರಡನೇ ರ್ಯಾಲಿ ಸ್ಥಳಕ್ಕೆ ಆಗಮಿಸಿದರು. ಈ ರ್ಯಾಲಿಯಲ್ಲಿಯೂ ಇದೇ ರೀತಿಯ ‘ಕಾಲ್ತುಳಿತದಂತಹ’ ಸನ್ನಿವೇಶಕ್ಕೆ ಸಾಕ್ಷಿಯಾಯಿತು, ರೋಮಾಂಚನಗೊಂಡ ಪ್ರೇಕ್ಷಕರು ಬ್ಯಾರಿಕೇಡ್‌ಗಳನ್ನು ಮುರಿದು ವೇದಿಕೆಯನ್ನು ತಲುಪಲು ಪ್ರಯತ್ನಿಸಿದರು. ಇದರ ನಡುವೆಯೇ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಭಾಷಣ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read