ಪಕ್ಷ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಿದೆ? ಕಾರ್ಯಕರ್ತನನ್ನು ವಜಾಗೊಳಿಸಲು ಸಾಧ್ಯವೇ?; ಬಿಜೆಪಿ ಮಾಜಿ ಶಾಸಕ, ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಪ್ರಶ್ನೆ

ಉಡುಪಿ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಪಕ್ಷದಿಂದ ಉಚ್ಛಾಟನೆ ವಿಚಾರವಾಗಿ ರಘುಪತಿ ಭಟ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಘುಪತಿ ಭಟ್, ಬಿಜೆಪಿ ಶಿಸ್ತು ಸಮಿತಿಯ ನೋಟಿಸ್ ಈವರೆಗೂ ನನಗೆ ತಲುಪಿಲ್ಲ. ಮಾಧ್ಯಮಗಳ ಮೂಲಕ ನನ್ನ ಉಚ್ಛಾಟನೆ ಮಾಡಿರುವುದು ಗೊತ್ತಾಯಿತು. ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾ ಮಾಡುತ್ತೇವೆ ಎಂದಿದ್ದಾರೆ. ಪಕ್ಷ ಯಾವ ಹುದ್ದೆಯಂದ ನನ್ನ ವಜಾ ಮಾಡಿದೆ ಎಂದು ಮೊದಲು ಹೇಳಲಿ ಎಂದಿದ್ದಾರೆ.

ಇಂತಹ ವಜಾಗಳಿಗೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಮೋದಿಗೆ ಬೈದಿಲ್ಲ, ರಾಜ್ಯದ ನಾಯಕರನ್ನು ಬೈದಿಲ್ಲ. ಬಿಜೆಪಿ ಪಕ್ಷದ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷದ ನಾಯಕರನ್ನು ಟೀಕಿಸಿದ ಜಗದೀಶ್ ಶೆಟ್ಟರ್ ಮತ್ತೆ ಪಕ್ಷಕ್ಕೆ ಬಂದರು. ಪಕ್ಷಕ್ಕೆ ವಾಪಾಸ್ ಆಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು. ಇದು ಶಾಶ್ವತವಾದ ವಜಾ ಅಲ್ಲ. ಪರಿಷತ್ ಚುನಾವಣೆಯಲ್ಲಿ ಗೆದ್ದರೆ ವಜಾ ರದ್ದಾಗುತ್ತದೆ. ಬಿಜೆಪಿ ಕಾರ್ಯಕರ್ತನನ್ನು ವಜಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read