ಅಮೀರ್ ಖಾನ್ ವಿಶಿಷ್ಟ ಅಭ್ಯಾಸ ಬಹಿರಂಗಪಡಿಸಿದ ಆರ್.‌ ಮಾಧವನ್

2009ರ ಬ್ಲಾಕ್‌ಬಸ್ಟರ್ ಚಿತ್ರ ‘3 ಈಡಿಯಟ್ಸ್’ ನ ನಟ ಆರ್. ಮಾಧವನ್, ಅಮೀರ್ ಖಾನ್ ಅವರ ಬಗ್ಗೆ ಒಂದು ಆಸಕ್ತಿದಾಯಕ ಸಂಗತಿ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ತಮ್ಮ ಹೊಸ ಚಿತ್ರ ‘ಹಿಸ್ಸಾಬ್ ಬರಾಬರ್’ ಪ್ರಚಾರದಲ್ಲಿರುವ ಮಾಧವನ್, ನಟ ಅಮೀರ್ ಖಾನ್ ಅವರ ವಿಶಿಷ್ಟ ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ. ಅಮೀರ್ ಖಾನ್ ತಮ್ಮ ಜನಪ್ರಿಯತೆಯ ಹೊರತಾಗಿಯೂ ʼವಾಲೆಟ್ʼ ಇಲ್ಲದೆ ಹೊರಗೆ ಹೋಗುವ ಅಭ್ಯಾಸ ಹೊಂದಿದ್ದಾರೆ ಎಂದು ಮಾಧವನ್ ತಿಳಿಸಿದ್ದಾರೆ.

“ನಾನು ಅಷ್ಟೊಂದು ಅತಿರೇಕಕ್ಕೆ ಹೋಗುವುದಿಲ್ಲ. ಅಮೀರ್ ಅವರ ಸ್ಟಾರ್‌ಡಮ್ ಅವರಿಗೆ ಹಾಗೆ ಇರಲು ಅವಕಾಶ ಮಾಡಿಕೊಟ್ಟಿದೆ. ಅವರಿಗೆ ಬೇಕಾದ ಎಲ್ಲವನ್ನೂ ಇತರರೇ ಕೊಡುತ್ತಾರೆ. ಆದರೆ ಅವರು ಅದಕ್ಕೆ ಪಾವತಿಸುತ್ತಾರೆ. ನನ್ನ ವ್ಯಕ್ತಿತ್ವ ಹಾಗಲ್ಲ. ನಾನು ಒಂಟಿಯಾಗಿ ಹೋಗಲು ಇಷ್ಟಪಡುತ್ತೇನೆ. ನನಗೆ ಆ ಸ್ವಾತಂತ್ರ್ಯ ಬೇಕು” ಎಂದು ಮಾಧವನ್ ಹೇಳಿದ್ದಾರೆ.

ತಮ್ಮ ಖರ್ಚಿನ ಬಗ್ಗೆ ನಾನು ತುಂಬಾ ಜಾಗೃತನಾಗಿರುವುದಿಲ್ಲ ಎಂದು ಮಾಧವನ್ ಹೇಳಿದರೂ, ಬಜೆಟ್ ಮೀರುವ ಖರ್ಚು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಉದಾಹರಣೆಗೆ, ಬಜೆಟ್ ಮೀರಿದ ಐಷಾರಾಮಿ ಕಾರು ಖರೀದಿಸುವುದಿಲ್ಲ ಎಂದಿದ್ದಾರೆ.

ತಮ್ಮ ಪತ್ನಿ ಸರಿತಾ ಅವರು ತನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದರ ಬಗ್ಗೆಯೂ ಮಾಧವನ್ ಮಾತನಾಡಿದ್ದಾರೆ. “ನಾನು ತುಂಬಾ ಜಾಗೃತವಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ, ಆದರೆ ಸರಿತಾ, ನಾನು ಅಷ್ಟು ಜಾಗೃತನಲ್ಲ ಎಂದು ಹೇಳುತ್ತಾರೆ. ನನ್ನ ಬಳಿ ಇರುವುದನ್ನು ನಾನು ಖರ್ಚು ಮಾಡುತ್ತೇನೆ” ಎಂದು ಮಾಧವನ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read