ಅಮೋಘ ಪ್ರದರ್ಶನ ನೀಡಿದ ಆರ್. ಅಶ್ವಿನ್ ಹಲವು ದಾಖಲೆ

ರೋಸೌ(ಡೊಮಿನಿಕಾ): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಅಮೋಘ ಪ್ರದರ್ಶನ ನೀಡಿದ ಆರ್. ಅಶ್ವಿನ್ 5 ವಿಕೆಟ್ ಕಬಳಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಅಶ್ವಿನ್ ಅಮೋಘ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

24.3 ಓವರ್ ಬೌಲಿಂಗ್ ಮಾಡಿದ ಅವರು 6 ಮೇಡನ್ ಓವರ್ ಮಾಡಿ 60 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 33 ಬಾರಿ 5 ವಿಕೆಟ್ ಗೊಂಚಲು ಗಳಿಸಿದ್ದಾರೆ. ಇಂಗ್ಲೆಂಡ್ ನ ಜೇಮ್ಸ್ ಅಂಡರ್ಸನ್ 32 ಬಾರಿ 5 ವಿಕೆಟ್ ಗಳಿಸಿದ್ದು ಅವರ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ.

ಅನಿಲ್ ಕುಂಬ್ಳೆ 35 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಅವರ ನಂತರ ಈ ಮೈಲುಗಲ್ಲು ಸ್ಥಾಪಿಸಿದ ಎರಡನೇ ಭಾರತೀಯ ಆರ್. ಅಶ್ವಿನ್ ಅವರಾಗಿದ್ದಾರೆ. ಮುತ್ತಯ್ಯ ಮುರುಳಿದರನ್ 67 ಸಲ, ಶೇನ್ ವಾರ್ನ್ 37 ಬಾರಿ, ರಿಚರ್ಡ್ ಹ್ಯಾಡ್ಲೀ 36 ಬಾರಿ, ರಂಗನ್ ಹೆರಾತ್ 34 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

ಅಲ್ಲದೇ ಟೆಸ್ಟ್ ವೃತ್ತಿ ಬದುಕಿನಲ್ಲಿ ತಂದೆ, ಮಗನ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಗೌರವಕ್ಕೆ ಅಶ್ವಿನ್ ಪಾತ್ರರಾಗಿದ್ದಾರೆ. 2011 ರಿಂದ 13 ರವರೆಗೆ ವೆಸ್ಟ್ ಇಂಡೀಸ್ ನ ಶಿವನಾರಾಯಣ ಚಂದ್ರಪಾಲ್ ಅವರನ್ನು ಹಲವು ಬಾರಿ ಔಟ್ ಮಾಡಿದ್ದ ಅಶ್ವಿನ್ ಬುಧವಾರ ನಡೆದ ಪಂದ್ಯದಲ್ಲಿ ಚಂದ್ರಪಾಲ್ ಅವರ ಪುತ್ರ ತೇಜನಾರಾಯಣ್ ಅವರ ವಿಕೆಟ್ ಪಡೆದಿದ್ದಾರೆ.

ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ವಿಶ್ವದ 16 ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ.

ಮೂರೂ ಮಾದರಿ ಸೇರಿ 700 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಆರ್. ಅಶ್ವಿನ್. ಅನಿಲ್ ಕುಂಬ್ಳೆ 956 ವಿಕೆಟ್, ಹರ್ ಭಜನ್ ಸಿಂಗ್ 711 ವಿಕೆಟ್ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read