ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಳೆದ ೬ ತಿಂಗಳಿಂದ ಒಂದು ರೀತಿಯಲ್ಲಿ ಐಸಿಯುನಲ್ಲಿದೆ. ಇಲ್ಲಿ ಯಾರು ಮುಖ್ಯಮಂತ್ರಿ ಎಂಬುದೇ ಗೊತ್ತಾಗದ ಸ್ಥಿತಿ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿ ಸ್ಫೋಟದ ಬಗ್ಗೆ ಮಾತನಾಡುತ್ತಾ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. ಅವರು ಏನೇ ಹೇಳಿದರೂ ದೇಶದ ಜನರಿಗೆ ಭದ್ರತೆ ಅಂದರೆ ಅದು ನರೇಂದ್ರ ಮೋದಿ. ಭದ್ರತೆ ಅಂದರೆ ಬಿಜೆಪಿ ಎಂಬುದು ಗೊತ್ತಿದೆ. ಕಾಂಗ್ರೆಸ್ ಮೇಲೆ ದೇಶದ ಜನರಿಗೆ ಯಾವುದೇ ನಂಬಿಕೆಯಿಲ್ಲ ಎಂದರು.
ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿ ಸರ್ಕಾರ ಐಸಿಯುನಲ್ಲಿದೆ. ಇಲ್ಲಿ ಯಾರು ಮುಖ್ಯಮಂತ್ರಿ? ಎಷ್ಟು ಜನ ಮಂತ್ರಿಗಳು ಖಾಲಿ ಆಗ್ತಾರೆ? ಎಷ್ಟು ಜನ ಒಳಗಡೆ ಬರ್ತಾರೆ? ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.
