BIG NEWS: ಪಾಕ್ ಪರ ಘೋಷಣೆ ಪ್ರಕರಣ: FSL ವರದಿ ಬಂದರೂ ಬಹಿರಂಗಪಡಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ; ಆರ್.ಅಶೋಕ್ ಆಕ್ರೋಶ

ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣ ಸಂಬಂಧ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದ್ದ ವಿಡಿಯೋ, ಆಡಿಯೋ ವರದಿ ಪೊಲೀಸರ ಕೈಸೇರಿದ್ದರೂ ಸರ್ಕಾರ ಬಹಿರಂಗ ಪಡಿಸುತ್ತಿಲ್ಲ ಎಂದು ವಿಪಕ್ಷ ನಯಾಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಫ್ ಎಸ್ ಎಲ್ ವರದಿ ಬಂದು ಹಲವು ಗಂಟೆ ಕಳೆದಿದೆ. ಆದರೂ ಬಹಿರಂಗ ಪಡಿಸದಿರುವಿದು ನೋಡಿದರೆ ಕಾಂಗ್ರೆಸ್ ಸರ್ಕಾರದ ನಡೆ ಮೇಲೆ ಅನುಮಾನ ಹುಟ್ಟಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದ ಎಫ್ ಎಸ್ ಎಲ್ ವರದಿ ಬಂದು 5-6 ಗಂಟೆಗಳಾಗಿವೆ. ಆದರೆ ಸರ್ಕಾರ ಇದನ್ನು ಬಹಿರಂಗ ಪಡಿಸಲು ಮೀನಾಮೇಷ ಎಣಿಸುತ್ತಿದೆ. ವರದಿಯನ್ನು ಬಹಿರಂಗ ಪಡಿಸುತ್ತಾರೋ ಇಲ್ಲವೋ? ಎಂಬುದರ ಮೇಲೆ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ದೇಶಪ್ರೇಮಿಗಳ ಪರ ಇದೆಯೋ ಅಥವಾ ದೇಶದ್ರೋಹಿಗಳ ಪರ ಇದೆಯೋ ಎಂಬುದನ್ನು ಕನ್ನಡಿಗರು ನಿರ್ಧಾರ ಮಾಡುತಾರೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read